ಶ್ರೀ ಸಿದ್ಧೇಶ್ವರ ಮಹಾಸ್ವಾಮಿಗಳ ಗುರುನಮನ ಮಹೋತ್ಸವ

gurunamana
ರಬಕವಿಯ ಭಾರತ ಗ್ಯಾಸ್ ಆವರಣದಲ್ಲಿ ದೀಪ ಬೆಳಗಿಸುವ ಮೂಲಕ ಜ್ಞಾನಯೋಗಿ ಸಿದ್ಧೇಶ್ವರ ಶ್ರೀಗಳಿಗೆ ಗುರುನಮನ ಸಲ್ಲಿಸಲಾಯಿತು. ಸೋಮಶೇಖರ ಕೊಟ್ರಶೆಟ್ಟಿ ಇದ್ದರು.
Published on

ರಬಕವಿ/ಬನಹಟ್ಟಿ: ರಬಕವಿಯ ಭಾರತ ಗ್ಯಾಸ್ ವಿತರಣಾ ಆವರಣದಲ್ಲಿ ಸೋಮವಾರ ರಾತ್ರಿ ದೀಪ ಬೆಳಗಿಸುವ ಮೂಲಕ ಜ್ಞಾನಯೋಗಿ ಸಿದ್ಧೇಶ್ವರ ಶ್ರೀಗಳಿಗೆ ಗುರುನಮನ ಸಲ್ಲಿಸಲಾಯಿತು.

ಡಿ.ಕೆ. ಕೊಟ್ಟರಶೆಟ್ಟಿ ೌಂಡೇಷನ್‌ನ ಸೋಮಶೇಖರ ಕೊಟ್ಟರಶೆಟ್ಟಿ ಮಾತನಾಡಿ, ನಡೆದಾಡುವ ದೇವರೆಂದೇ ಖ್ಯಾತರಾಗಿದ್ದ ಶ್ರೀಗಳು ಇಂದಿಗೂ ಜನರ ಮನಸ್ಸಿನಲ್ಲಿ ಅಜರಾಮರರಾಗಿದಾರೆ. ಅವರ ಆದರ್ಶ ಜೀವನ ನಮಗೆಲ್ಲ ಮಾದರಿಯಾಗಿದೆ. ಅವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನಾವೆಲ್ಲ ನಡೆಯೋಣ ಎಂದರು.

ಗಿರೀಶ ಮುತ್ತೂರ ಮಾತನಾಡಿದರು.

ಮಹಾದೇವಪ್ಪ ಮುತ್ತೂರ, ಎಂ. ಎಸ್. ಗಡೆನ್ನವರ, ಬಿ. ಜಿ. ದುಂಬಾಳೆ, ಡಾ. ಜಿ.ಎಚ್. ಚಿತ್ತರಗಿ, ರೇವಣ್ಣ ಉಮದಿ, ಸತೀಶ ಗದಗ, ಪ್ರಶಾಂತ ಬಿಳ್ಳೂರ, ಸಂಗಮೇಶ ಗುಣಕಿ, ಸಂಗಮೇಶ ಪರಮಶೆಟ್ಟಿ, ಮಹಾಂತೇಶ ಬೆಟಗೇರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net