ನಿತ್ಯ ಭಕ್ತಿಯಿಂದ ದೇವರ ಪೂಜೆ ಮಾಡಿ

17 BLK 01
ಭಾಲ್ಕಿ ತಾಲೂಕಿನ ಸಿದ್ಧೇಶ್ವರ ಗ್ರಾಮದಲ್ಲಿ ಶ್ರೀ ಸಿದ್ಧೇಲಿಂಗೇಶ್ವರ ೭೭ನೇ ಜಾತ್ರೋತ್ಸವ ಪ್ರಯುಕ್ತ ಮಂಗಳವಾರ ರಾತ್ರಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಶ್ರೀ ಡಾ.ಬಸವಲಿಂಗ ಅವಧೂತರು ಪ್ರವಚನ ನೀಡಿದರು.
Published on

ಭಾಲ್ಕಿ: ಶ್ರೀ ಸಿದ್ಧಲಿಂಗೇಶ್ವರ ಸ್ವಾಮಿ ಪವಾಡ ಪುರುಷರು. ಅವರು ಅನೇಕ ಅದ್ಭುತಗಳನ್ನು ಮಾಡಿದ್ದಾರೆ ಎಂದು ನೆರೆಯ ತೆಲಂಗಾಣದ ಜಹೀರಾಬಾದ್ ತಾಲೂಕಿನ ಮಲ್ಲಯ್ಯಗಿರಿ, ದೇಗಲಮಡಿ ಹಾಗೂ ಬಸವಕಲ್ಯಾಣ ಆಶ್ರಮದ ಪೀಠಾಧಿಪತಿ ಶ್ರೀ ಡಾ.ಬಸವಲಿಂಗ ಅವಧೂತರು ನುಡಿದರು.

ತಾಲೂಕಿನ ಸಿದ್ದೇಶ್ವರ ಗ್ರಾಮದ ಶ್ರೀ ಸಿದ್ಧೇಲಿಂಗೇಶ್ವರ ೭೭ನೇ ಜಾತ್ರೋತ್ಸವ ಪ್ರಯುಕ್ತ ಮಂಗಳವಾರ ರಾತ್ರಿ ಹಮ್ಮಿಕೊಂಡಿದ್ದ ಪ್ರವಚನ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವಧೂತರು, ಸಿದ್ಧಲಿಂಗೇಶ್ವರು ನಂಬಿ ಬರುವ ಭಕ್ತರ ಕಷ್ಟಗಳನ್ನು ಪರಿಹರಿಸುವ ಶಕ್ತಿ ಹೊಂದಿದ್ದಾರೆ. ಎಲ್ಲರೂ ನಿತ್ಯ ಭಕ್ತಿಯಿಂದ ದೇವರ ಪೂಜೆ ಮಾಡಬೇಕು.ಅಧಾತ್ಮದ ಒಲವು ಬೆಳೆಸಿಕೊಳ್ಳಬೇಕು. ಮೂಢನಂಬಿಕೆ ಆಚರಣೆಗಳಿಂದ ದೂರ ಇರಬೇಕು ಎಂದು ಹೇಳಿದರು.

ಇಂದಿನ ಯುವಕರು ಮಾದಕ ವಸ್ತುಗಳ ಚಟಕ್ಕೆ ಬಿದ್ದು ಜೀವನ ವ್ಯರ್ಥ ಮಾಡಿಕೊಳ್ಳುತ್ತಿದ್ದಾರೆ. ಹಿರಿಯರನ್ನು ಗೌರವಿಸಬೇಕು. ಜನ್ಮಕೊಟ್ಟ ತಂದೆ-ತಾಯಿಯ ಸೇವೆ ಮಾಡಬೇಕು. ಯಾರೊಂದಿಗೂ ವೈಷಮ್ಯ ಬೆಳೆಸಿಕೊಳ್ಳಬಾರದು. ಪರಸ್ಪರ ಪ್ರೀತಿಯಿಂದ ಕುಟುಂಬದಲ್ಲಿ ಬಾಳಬೇಕೆಂದು ಕಿವಿಮಾತು ಹೇಳಿದರು.
ಶಶಿಧರ ಸೀತಾ, ಮಹಾದೇವಿ ಸೀತಾ ದಂಪತಿ ಅವಧೂತರ ಪಾದಪೂಜೆ ನೆರವೇರಿಸಿದರು.

ಪ್ರಮುಖರಾದ ರಾಜಕುಮಾರ ಬೆಲ್ದಾಳೆ, ಸಂತೋಷ ತರನಳ್ಳೆ, ರಾಜಕುಮಾರ ಕನ್ನಕಟೆ ಸುಧಾಕರ ಪರ್ಮಾ, ವಿಶ್ವನಾಥ ಪರ್ಮಾ, ವೀರಶೆಟ್ಟಿ ಖಂಡ್ರೆ, ನಾಗಯ್ಯಸ್ವಾಮಿ, ಸಚಿನ ತರನಳೆ, ಶಾಮರಾವ ಪರ್ಮಾ, ಮಲ್ಲಪ್ಪ ಹುಚ್ಚೆ, ಅನೀಲ ಪರ್ಮಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net