ಶ್ರೀ ಸಿದ್ಧಾರೂಢ ಸ್ವಾಮಿ ಜಲರಥೋತ್ಸವ 10 ರಂದು

siddharodha math latest
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:

ಶಿವ ಸ್ವರೂಪಿ ಶ್ರೀ ಸದ್ಗುರು ಸಿದ್ಧಾರೂಢ ಸ್ವಾಮಿಯವರ 96ನೇ ಪುಣ್ಯಾರಾಧನೆಯ ಅಂಗವಾಗಿ ಆ.4ರಿಂದ 10ರವರೆಗೆ ಶಿವನಾಮ ಸಪ್ತಾಹ ಏರ್ಪಡಿಸಲಾಗಿದೆ. 10ರಂದು ಸಂಜೆ 5.30ಕ್ಕೆ ಶ್ರೀ ಸಿದ್ಧಾರೂಢರ ಜಲರಥೋತ್ಸವ ಜರುಗಲಿದೆ ಎಂದು ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠ ಟ್ರಸ್ಟ್ ಕಮಿಟಿ ಚೇರ್ಮನ್ ಚನ್ನವೀರ ಮುಂಗುರವಾಡಿ ತಿಳಿಸಿದರು.

ಹುಬ್ಬಳ್ಳಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀ ಮಠದ ಮುಖ್ಯ ಆಡಳಿತಾಧಿಕಾರಿ ಹಾಗೂ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಬಿ.ಎಸ್.ಭಾರತಿ ಜಲರಥೋತ್ಸವಕ್ಕೆ ಚಾಲನೆ ನೀಡುವರು. ಕರ್ನಾಟಕ, ಮಹಾರಾಷ್ಟ, ಗೋವಾ ಸೇರಿ ವಿವಿಧೆಡೆಗಳಿಂದ ಸುಮಾರು 1.5 ಲಕ್ಷ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಶಿವ ನಾಮ ಸಪ್ತಾಹದಲ್ಲಿ ನಿತ್ಯ ಬೆಳಗ್ಗೆ 7.45ಕ್ಕೆ ಶ್ರೀಗಳ ಪುರಾಣ ಪಠಣ, 9.30ಕ್ಕೆ ಪ್ರವಚನ ಹಾಗೂ ಸಂಜೆ 5 ಗಂಟೆಗೆ ಕೀರ್ತನೆ, ಮಹಾಪೂಜೆ ನೆರವೇರಲಿವೆ ಎಂದರು.

ಶ್ರೀ ಮಠದದಲ್ಲಿ ಹಲವು ಅಭಿವೃದ್ಧಿ ಕೆಲಸಗಳು ನಡೆದಿವೆ. ಯಾತ್ರಿ ನಿವಾಸದಲ್ಲಿನ 24 ಕೊಠಡಿಗಳನ್ನು ನವೀಕರಿಸಲಾಗಿದೆ. ತೇರಿನ ಮನೆ ನವೀಕರಣ, ಅದ್ವೈತ ವೇದಾಂತ ಗ್ರಂಥಾಲಯ ಸ್ಥಾಪನೆ ಮಾಡಲಾಗಿದೆ. ಬಡ ಮಕ್ಕಳ ವಿದ್ಯಾಭ್ಯಾಸ ಮತ್ತು ವಾಸ್ತವ್ಯಕ್ಕಾಗಿ ಆನಂದ ನಗರದ ಮುಖ್ಯರಸ್ತೆಯಲ್ಲಿರುವ ಮಠದ ಜಾಗೆಯಲ್ಲಿ ವಿದ್ಯಾರ್ಥಿ ನಿಲಯ ಸ್ಥಾಪಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.

ವೈಸ್ ಚೇರ್ಮನ್ ವಿನಾಯಕ ಘೊಡಕೆ, ಧರ್ಮದರ್ಶಿಗಳಾದ ಗೋವಿಂದ ಮಣ್ಣೂರ, ಮಂಜುನಾಥ ಮುನವಳ್ಳಿ, ಬಾಳು ಮಗಜಿಕೊಂಡಿ, ಬಸವರಾಜ ಕಲ್ಯಾಣಶೆಟ್ಟರ, ಸರ್ವಮಂಗಳಾ ಪಾಠಕ, ಗೀತಾ ಕಲಬುರಗಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net