ಶ್ರೀ ಸಿದ್ಧಲಿಂಗೇಶ್ವರ ಮಹಾರಾಜ್ ಕಿ ಜೈ

3 5 SBD 2
ಶಹಾಬಾದ್ ತಾಲೂಕಿನ ರಾವೂರಿನಲ್ಲಿ ಅಪಾರ ಭಕ್ತರ ಜೈಘೋಷಗಳ ಮಧ್ಯೆ ಅದ್ದೂರಿಯಾಗಿ ಶ್ರೀ ಸಿದ್ದಲಿಂಗೇಶ್ವರರ ರಥೋತ್ಸವ ನೆರವೇರಿತು.
Published on

ಶಹಾಬಾದ್: ರಾವೂರು ಗ್ರಾಮದಲ್ಲಿ ಅಸಂಖ್ಯಾತ ಭಕ್ತರ ಜೈಘೋಷದ ಮಧ್ಯೆ ಗುರುವಾರ ಸಂಜೆ ಅದ್ದೂರಿಯಾಗಿ ಶ್ರೀ ಸಿದ್ಧಲಿಂಗೇಶ್ವರರ ರಥೋತ್ಸವ ನೆರವೇರಿತು.

ಪೀಠಾಧಿಪತಿ ಶ್ರೀ ಸಿದ್ಧಲಿಂಗ ಸ್ವಾಮಿಗಳ ಸಾನ್ನಿಧ್ಯದಲ್ಲಿ ಬೆಳಗ್ಗೆ ಕರ್ತೃ ಗದ್ದುಗೆಗೆ ಅಭಿಷೇಕ, ಬಿಲ್ವಾರ್ಚನೆ, ವಿಶೇಷ ಅಲಂಕಾರ, ಮಹಾಮಂಗಳಾರತಿ ನೆರವೇರಿತು. ಸಂಜೆ ಗ್ರಾಮದ ರಾಮಲಿಂಗೇಶ್ವರ ದೇವಸ್ಥಾನದಿಂದ ಕಳಸ, ಪ್ರಮುಖರ ಮನೆಗಳಿಂದ ನಂದಿಕೋಲನ್ನು ಮೆರವಣಿಗೆ ಮೂಲಕ ಶ್ರೀಮಠಕ್ಕೆ ಕರೆ ತರಲಾಯಿತು. ಸಂಜೆ ೬ಕ್ಕೆ ಶ್ರೀ ಸಿದ್ಧಲಿಂಗ ಸ್ವಾಮಿಗಳು ಹಾಗೂ ಹುಕ್ಕೇರಿ ಮಠದ ಶ್ರೀ ಸದಾಶಿವ ಸ್ವಾಮಿಗಳು ಸಂಭ್ರಮದ ರಥೋತ್ಸವಕ್ಕೆ ಚಾಲನೆ ನೀಡಿದರು. ಬಳಿಕ ಅಸಂಖ್ಯಾತ ಜನರು ಶ್ರೀ ಸಿದ್ಧಲಿಂಗೇಶ್ವರ ಮಹಾರಾಜ್ ಕಿ ಜೈ ಸೇರಿ ಇನ್ನಿತರ ಘೋಷಣೆ ಮೊಳಗಿಸಿದರು. ರಥಕ್ಕೆ ಉತ್ತತ್ತಿ, ಬಾಳೆಹಣ್ಣು ಹಾಗೂ ನಾಣ್ಯಗಳನ್ನು ಎಸೆದರು ಕೃತಾರ್ಥರಾದರು.

ಶ್ರೀಮಠದ ಪ್ರಧಾನ ಕಾರ್ಯದರ್ಶಿ ಡಾ.ಗುಂಡಣ್ಣ ಬಾಳಿ, ಪ್ರಮುಖರಾದ ಚನ್ನಣ್ಣ ಬಾಳಿ, ಶಿವಲಿಂಗಪ್ಪ ವಾಡೇದ, ಶ್ರೀನಿವಾಸ ಸಗರ, ಅಣ್ಣಾರಾವ ಬಾಳಿ, ಗುರುನಾಥ ಗುದ್ಗುಲ್, ತಿಪ್ಪಣ್ಣ ವಗ್ಗರ, ಚಣ್ಣಪ್ಪ ಅಳ್ಳೊಳ್ಳಿ, ಈಶ್ವರ ಬಾಳಿ, ಜಗನ್ನಾಥ ಗಡ್ಡದ, ಬಸವರಾಜ ಕರೆಳ್ಳಿ, ಸಿದ್ದರಾಮಪ್ಪ ದೇಸಾಯಿ, ಸಿದ್ದಲಿಂಗ ಬಾಳಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net