ಶ್ರೀ ಸಿದ್ದೇಶ್ವರ ಸ್ವಾಮಿ ದೇಗುಲ ಜೀರ್ಣೋದ್ಧಾರ ಕಾರ್ಯಕ್ರಮ ಮೇ.1ಕ್ಕೆ

27 ckm 1 renuka mahanta shivacharya swamyji
ಶ್ರೀ ರೇಣುಕಾಮಹಾಂತ ಶಿವಾಚಾರ್ಯ ಸ್ವಾಮೀಜಿ
Published on

ಚಿಕ್ಕಮಗಳೂರು: ಶ್ರೀಬೇರುಗಂಡಿ ಬೃಹನ್ಮಠದಲ್ಲಿ ಶ್ರೀಸಿದ್ಧೇಶ್ವರ ಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರ ಮತ್ತು ಗೋಪುರ ಕಲಸಾರೋಹಣ, ಶ್ರೀರೇಣುಕ ಮಹಾಂತ ಶಿವಾಚಾರ್ಯ ಸ್ವಾಮೀಜಿಗಳ ದ್ವಾದಶ ಪಟ್ಟಾಧಿಕಾರ ವರ್ಧಂತಿ ಮಹೋತ್ಸವ ಹಾಗೂ ಲೋಕ ಶಾಂತಿಗಾಗಿ ಹೋಮ ಹವನ ಮತ್ತು ಧರ್ಮ ಜಾಗೃತಿ ಕಾರ್ಯಕ್ರಮವನ್ನು ಮೇ1 ಮತ್ತು 2ರಂದು ಮಠದ ಆವರಣದಲ್ಲಿ ಆಯೋಜಿಸಲಾಗಿದೆ ಎಂದು ಮಾಚಗೊಂಡನಹಳ್ಳಿ ಶ್ರೀ ಬೇರುಗಂಡಿ ಮಠದ ಶ್ರೀ ರೇಣುಕಾಮಹಾಂತ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ಮಾಚಗೊಂಡನಹಳ್ಳಿಯ ಮಠದ ಆವರಣದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇ 1ರಂದು ಮಧ್ಯಾಹ್ನ 3 ಗಂಟೆಗೆ ಮಠದ ಆವರಣದಲ್ಲಿ ಗಂಗಾಪೂಜೆ, ಸಂಕಲ್ಪ-ಪುಣ್ಯಾಹ, ಗಣಪತಿ-ನಂದಿ-ಅಷ್ಟಲಕ್ಷ್ಮೀ ಕಳಸ, ಪಂಚ ಕಳಸ, ಏಕಾದಶರುದ್ರ ಕಳಸ, ಮಹಾಮೃತ್ಯುಂಜಯ ಕಳಸ, ದುರ್ಗಾ ಕಳಸ, ದಶದಿಲ್ಪಾಲಕರ ಕಳಸ ಪೂಜೆ, ಗಣಹೋಮ, ಆಯುಷ್ಯ ಹೋಮ, ಜಯಾದಿ ಹೋಮ, ರಕ್ಷಘ್ನ ಹೋಮ ನೆರವೇರಲಿವೆ ಎಂದು ಮಾಹಿತಿ ನೀಡಿದರು.
2 ರಂದು ಪ್ರಾಥಃಕಾಲದಲ್ಲಿ ನೊಣವಿನಕೆರೆ ಸೋಮೇಕಟ್ಟೆ ಶ್ರೀಕಾಡಸಿದ್ದೇಶ್ವರ ಸಂಸ್ಥಾನಮಠದ ಶ್ರೀ ಡಾ.ಕರಿವೃಷಭ ದೇಶಿಕೇಂದ್ರ ಶಿವಯೋಗಿ ಸ್ವಾಮೀಜಿಗಳ ನೇತೃತ್ವದಲ್ಲಿ ಶ್ರೀಸಿದ್ದೇಶ್ವರ ಸ್ವಾಮೀಜಿ ಗದ್ದುಗೆಗೆ ಏಕಾದಶ ರುದ್ರಾಭಿಷೇಕ, ಅಷ್ಟೋತ್ತರ ಶತನಾಮಾವಳಿ, ಅಲಂಕಾರ ಪೂಜೆ, ರಾಜೋಪಚಾರ ಮಹಾ ಮಂಗಳಾರತಿ ಹಾಗೂ ಶ್ರೀ ರೇಣುಕ ಮಹಾಂತ ಶಿವಾಚಾರ್ಯ ಸ್ವಾಮೀಜಿಗಳ ದ್ವಾದಶ ಪಟ್ಟಾಧಿಕಾರ ಸಂಭ್ರಮ ಅಂಗವಾಗಿ ದರಿದ್ರಾಲೇಪನ, ಮಂಗಲಾಭಿಷೇಕ, ಪುಣ್ಯಾಧಿ ಸ್ನಾನ ಕಾರ್ಯಕ್ರಮ ಜರುಗಲಿವೆ ಎಂದು ವಿವರಿಸಿದರು.
ಕಾರ್ಯಕ್ರಮವನ್ನು ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಉಪಸಭಾಪತಿ ಎಂ.ಕೆ ಪ್ರಾಣೇಶ್, ಶಾಸಕರಾದ ಎಚ್.ಡಿ ತಮ್ಮಯ್ಯ, ನಯನ ಮೋಟಮ್ಮ, ಮಾಜಿ ಶಾಸಕರಾದ ಸಿ.ಟಿ ರವಿ, ಎಂ.ಪಿ ಕುಮಾರಸ್ವಾಮಿ, ಮಾಜಿ ಎಂಎಲ್‌ಸಿ ಗಾಯತ್ರಿ ಶಾಂತೇಗೌಡ, ಮಾಜಿ ಸಚಿವ ಬಿ.ಬಿ ನಿಂಗಯ್ಯ, ಪ್ರಮುಖರಾದ ಎಚ್.ಎಂ.ಲೋಕೇಶ್, ವೀರರಾಜಗೌಡ, ಮಹೇಶ್.ಕೆ.ಎಸ್, ಶಿವಸ್ವಾಮಿ, ಧೃವಕುಮಾರ್, ಜಿ.ಎಂ.ರಾಜಶೇಖರ್ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಶಿವಶಂಕರ್, ಎಚ್.ಎಂ.ಲೋಕೇಶ್, ಎಂ.ಆರ್.ಪೂರ್ಣೇಶ್ ಮೂರ್ತಿ, ವೈ.ಸಿ.ಹರೀಶ್, ದೇವಾನಂದ, ರಾಜಶೇಖರ್, ರಾಜೇಶ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net