

ಅಳವಂಡಿ: ಗ್ರಾಮದ ಶ್ರೀಸಿದ್ದೇಶ್ವರ ಸಂಯುಕ್ತ ಪದವಿ ಪೂರ್ವ ವಿದ್ಯಾಲಯದ ಪ್ರೌಢಶಾಲೆಯ ವಿಧ್ಯಾರ್ಥಿಗಳು ಕೊಪ್ಪಳದಲ್ಲಿ ನಡೆದ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಗಣನೀಯ ಸಾಧನೆ ಮಾಡಿ ತಾಲೂಕಾ ಮಟ್ಟಕ್ಕೆ ಆಯ್ಕೆಯಾದ ಮಕ್ಕಳನ್ನು ಶಿಕ್ಷಕರು ಸನ್ಮಾನಿಸಿದರು.
ಇದನ್ನೂ ಓದಿ:http://ಶ್ರೀಸಿದ್ದೇಶ್ವರ ಶಾಲೆಯ ಮಕ್ಕಳ ಸಾಧನೆ
ವಾಲಿಬಾಲ ಪ್ರಥಮ, 100 ಮೀಟರ ಓಟ ಪ್ರಥಮ, 200 ಮೀಟರ ಓಟ ಪ್ರಥಮ, 400 ಮೀಟರ ರೀಲೇ ಪ್ರಥಮ, ಚಕ್ರ ಎಸೆತ ಪ್ರಥಮ, ಖೋಖೋ ದ್ವಿತೀಯ ಸ್ಥಾನ, ಕಬಡ್ಡಿ ದ್ವಿತೀಯ ಸ್ಥಾನ ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ, ಶಾಲೆಯ ಸಿಬ್ಬಂದಿಗಳು ಶಾಲಾ ಸಮಿತಿಯವರು ಅಭಿನಂದನೆ ಸಲ್ಲಿಸಿದ್ದಾರೆ.
ಮುಖ್ಯ ಶಿಕ್ಷಕ ವಿ.ಎಚ್.ಪುಲೇಶಿ, ಶಿಕ್ಷಕರಾದ ಎಚ್.ಎನ್.ಲಮಾಣಿ, ಎಂ.ಎಸ್.ಕೊಪ್ಪಳ, ವಾಸವಾಂಬೆ, ಸಂಪಕ್ಕ ಗೊಲ್ಲರ, ಶಕುಂತಲಾ ಹಿರೇಮಠ, ಗಾಯತ್ರಿ ಮಾಲಿಪಾಟೀಲ ಇತರರು ಇದ್ದರು.