

ಧಾರವಾಡ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿನ ಕಾಗಿರ್ಲ್ ಸ್ತೂಪಕ್ಕೆ ಮೈಸೂರಿನ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಬುಧವಾರ ಭೇಟಿ ನೀಡಿ ಮಹಾದಂಡನಾಯಕ ಜನರಲ್ ಕಾರಿಯಪ್ಪ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಡಾ. ಆನಂದ ಪಾಂಡುರಂಗಿ, ಚಂದ್ರಶೇಖರ ಅಮಿನಗಡ, ಡಾ. ಪಾರ್ವತಿ ಹಾಲಭಾವಿ, ಬಿ.ಡಿ. ಪಾಟೀಲ, ಶಿವಯೋಗಿ ಅಮಿನಗಡ, ಬಸವರಾಜ ತಾಳಿಕೋಟಿ, ನಾಗರತ್ನ ಅಮಿನಗಡ, ಮುರಳಿಧರರಾವ್, ಈರಣ್ಣ ಅಮಿನಗಡ, ಶಂಕರ ಪಂಡಿತ ಮುಂಜಿ, ವಸಂತ ಅರ್ಕಾಚಾರ, ಇತರರು ಇದ್ದರು.