

ಹುಬ್ಬಳ್ಳಿ: ಶ್ರಾವಣ ಪುರಾಣ ಮಂಗಲೋತ್ಸವ ನಿಮಿತ್ತ ತಾಲೂಕಿನ ಸುಳ್ಳ ಗ್ರಾಮದಲ್ಲಿ ಸೋಮವಾರ ಬೆಳಗ್ಗೆ ಪಂಚಗ್ರಹ ಹಿರೇಮಠದ ಶ್ರೀ ಶಿವಸಿದ್ಧರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ ಹಾಗೂ ಶ್ರೀ ಸಿದ್ಧರಾಮೇಶ್ವರ ಮಂಗಲಮೂರ್ತಿ ಪಲ್ಲಕ್ಕಿ ಉತ್ಸವ ಸಂಭ್ರಮದಿಂದ ಜರುಗಿತು.
ಪಂಚಗ್ರಹ ಹಿರೇಮಠದಿಂದ ಆರಂಭವಾದ ಪಲ್ಲಕ್ಕಿ ಉತ್ಸವವು, ಸಂಜೆಯವರೆಗೂ ಗ್ರಾಮದ ಎಲ್ಲ ಓಣಿಗಳಲ್ಲಿ ಸಂಚರಿಸಿತು. ಶ್ರೀಗಳು ಭಕ್ತರಿಗೆ ದರ್ಶನಾಶೀರ್ವಾದ ನೀಡಿದರು. ಭಕ್ತರು ನೀರು, ಹಣ್ಣು ಕಾಯಿ, ನೈವೇದ್ಯ, ದಕ್ಷಿಣೆ ಸಮರ್ಪಿಸಿ, ಶ್ರೀ ಗಳಿಗೆ ನಮಿಸಿದರು.
ಮುತೆôದೆಯರ ಪೂರ್ಣಕುಂಭ, ಮಹಿಳೆಯರ ಡೊಳ್ಳುಕುಣಿತ, ಕರಡಿ ಮಜಲು, ಡೊಳ್ಳು, ಜೊಡೆತ್ತಿನ ಮೆರವಣಿಗೆಗೆ ಕಳೆ ತಂದವು.
ಗ್ರಾಮದ ಹಿರಿಯರಾದ ಅರ್ಜುನಪ್ಪ ಮೆಣಸಿನಕಾಯಿ, ಮಲ್ಲಿಕಾರ್ಜುನ ಅಸುಂಡಿ, ಹೊಳೆಪ್ಪ ಪೂಜಾರ, ಸತೀಶ ದೇಮಕ್ಕನವರ, ಸಣಕಲ್ಲಪ್ಪ ಒಂಟಿ, ಮಲ್ಲಿಕಾಜಿಗೌಡ ಹಿರೇಗೌಡರ, ನಿಂಗಪ್ಪ ಶಿವಳ್ಳಿ, ಸಿದ್ರಾಮಪ್ಪ ದೇಮಕ್ಕನವರ, ಮಹಾದೇವ ಪೂಜಾರ, ಪ್ರದೀಪ ದೇಮಕ್ಕನವರ, ದೊಡ್ಡಯಲ್ಲಪ್ಪ ನೆರ್ತಿ, ವೇ. ಸಿದ್ಧರಾಮಯ್ಯ ಹಿರೇಮಠ, ಸಿದ್ರಾಮಯ್ಯ ಹಿರೇಮಠ, ಮಂಜುನಾಥ ಹಿರೇಮಠ ಇತರರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.