

ಮುಳ್ಳೇರಿಯ: ಆಲಂಕೂಡ್ಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಭಾನುವಾರ ಶಿವಶಕ್ತಿ ಮಹಾಯಾಗ ವಿವಿಧ ಕಾರ್ಯಕ್ರಮಗಳೊಂದಿಗೆ ಸಂಪನ್ನವಾಯಿತು.
ಕುಂಟಾರು ರವೀಶ ತಂತ್ರಿ ಉಪಸ್ಥಿತಿಯಲ್ಲಿ, ಕಶೆಕೋಡಿ ಸೂರ್ಯನಾರಾಯಣ ಭಟ್ ನೇತೃತ್ವದಲ್ಲಿ ವೈದಿಕ ವಿದ್ವಾಂಸರ ಮಂತ್ರಘೋಷದೊಂದಿಗೆ ಊರ ಪರವೂರ ಭಕ್ತರ ಪ್ರಾರ್ಥನೆಯೊಂದಿಗೆ ಜರುಗಿತು. ಪ್ರಾತಃಕಾಲ ಗಣಪತಿ ಹೋಮ ನಡೆಯಿತು. ಹೋಮ ಪೂರ್ಣಾಹುತಿಯ ಸಂದಭರ್ ಶ್ರೀ ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ, ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಯೋಗಾನಂದ ಸರಸ್ವತಿ ಸ್ವಾಮೀಜಿ ಉಪಸ್ಥಿತರಿದ್ದರು.
ಆನುವಂಶಿಕ ಮೊಕ್ತೇಸರ ಪಿ.ಎಸ್.ಪುಣಿಂಚಿತ್ತಾಯ, ಶಿವಶಕ್ತಿ ಮಹಾಯಾಗ ಸಮಿತಿ ಅಧ್ಯಕ್ಷ ಮಧುಸೂದನ ಆಯರ್, ಉದ್ಯಮಿ ಶಿವಶಂಕರ ನೆಕ್ರಾಜೆ ಮೊದಲಾದವರಿದ್ದರು.