ಅ.18ರಿಂದ ಅ.24ರ ವರೆಗೆ ಶ್ರೀ ಗೋಕರ್ಣ ಮಠದಲ್ಲಿ ಶ್ರೀ ಶಾರದಾಮಹೋತ್ಸವ

gokarna
Published on

ಮಂಗಳೂರು: ರಥಬೀದಿ ಶ್ರೀ ಗೋಕರ್ಣ ಮಠದಲ್ಲಿ 52ನೇ ವರ್ಷದ ರಥಬೀದಿ ವೀರ ಬಾಲಕರ ಶ್ರೀ ಶಾರದಾಮಹೋತ್ಸವ-2023 ಕಾರ್ಯಕ್ರಮವು ಅ.18ರಿಂದ ಅ.24ರ ವರೆಗೆ ವಿಜೃಂಭಣೆಯಿಂದ ನಡೆಯಲಿದೆ.

ಅ.18ರಂದು ರಾತ್ರಿ 7 ಗಂಟೆಗೆ ಶಾರದಾ ಮಾತೆಯ ವಿಗ್ರಹವನ್ನು ಟ್ಯಾಂಕ್ ಕಾಲನಿಯಿಂದ ವಿ.ಟಿ.ರಸ್ತೆ, ರಥಬೀದಿ, ನಂದಾದೀಪ ರಸ್ತೆ, ಪ್ಲವರ್ ಮಾರ್ಕೆಟ್ ರಸ್ತೆ ಮೂಲಕ ಗೋಕರ್ಣ ಮಠಕ್ಕೆ ಕೊಂಡೊಯ್ಯಲಾಗುವುದು. ಅ.19 ರಂದು ರಾತ್ರಿ 9 ಗಂಟೆಗೆ ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ಶ್ರೀಮದ್ ವಿಧ್ಯಾದೀಶ ತೀರ್ಥ ಶ್ರೀಪಾದ ವಡೇರ್ ಸ್ವಾಮೀಜಿಯ ಉಪಸ್ಥಿತಿಯಲ್ಲಿ ಶ್ರೀ ಶಾರದಾ ಮಾತೆಯ ಪ್ರತಿಷ್ಠೆ ಹಾಗೂ ಭಜನಾ ಕಾರ್ಯಕ್ರಮ ನಡೆಯಲಿದೆ.

ಅ.20 ರಂದು ಸಂಜೆ ದುರ್ಗಾ ನಮಸ್ಕಾರ ಪೂಜೆ, ಅ.21 ರಿಂದ ಅ.23 ರವರೆಗೆ ಶ್ರೀ ಮಾತೆಗೆ ವಿವಿಧ ವಿಶೇಷ ಅಲಂಕಾರ, ಪೂಜೆ, ಭಜನೆ ಮತ್ತು ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಅ.24ರ ವಿಜಯದಶಮಿ ದಿನ ಬೆಳಿಗ್ಗೆ 8.30 ವಿಸರ್ಜನಾ ಪೂಜೆ, ಸಾಯಂಕಾಲ 5 ಗಂಟೆ ನಂತರ ಶಾರದಾ ಮಾತೆಯ ವಿಶೇಷ ಪೂರ್ಣಾಲಂಕಾರ ದರ್ಶನ. ರಾತ್ರಿ 9 ಗಂಟೆಗೆ ಪ್ರಾರ್ಥನೆ ನಂತರ ಶ್ರೀ ಶಾರದಾ ಮಾತೆಯ ವಿಸರ್ಜನಾ ಶೋಭಾಯಾತ್ರೆ ರಥಬೀದಿ ಗೋಕರ್ಣ ಮಠದಿಂದ ಹೊರಟು, ಶ್ರೀ ವೆಂಕಟರಮಣ ದೇವಸ್ಥಾನ, ಗದ್ದೆಕೇರಿ, ಡೊಂಗರಕೇರಿ, ನ್ಯೂಚಿತ್ರಾ ಮೂಲಕ ರಥಬೀದಿಯಿಂದ ಮಹಾಮಾಯ ದೇವಸ್ಥಾನದ ಕೆರೆಯಲ್ಲಿ ಶ್ರೀ ಶಾರದಾ ಮಾತೆಯ ವಿಗ್ರಹ ವಿಧಿಪೂರ್ವಕವಾಗಿ ವಿಸರ್ಜಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net