ಶ್ರೀ ಶಾರದಾ ಮಠ ಸಜ್ಜು

sri mata
ಶೃಂಗೇರಿ ಮಠದಲ್ಲಿ ಝಗಮಗಿಸುವ ವಿದ್ಯುತ್ ದೀಪಾಲಂಕಾರ.
Published on

ಶೃಂಗೇರಿ: ಶರನ್ನವರಾತ್ರಿ ಮಹೋತ್ಸವಕ್ಕೆ ಶ್ರೀ ಶಾರದಾಪೀಠ ಸಜ್ಜಾಗುತ್ತಿದೆ.

ಅ.2ರಂದು ಪ್ರಾರಂಭಗೊಳ್ಳುವ ನವರಾತ್ರಿ ಉತ್ಸವ 13ರ ವರೆಗೆ ನಡೆಯಲಿದೆ. ಪಟ್ಟಣದ ಮುಖ್ಯರಸ್ತೆಗಳು ಹಾಗೂ ವಿದ್ಯಾರಣ್ಯಪುರ ಗ್ರಾಪಂ ರಸ್ತೆಗಳನ್ನು ಸ್ವಚ್ಛಗೊಳಿಸಲಾಗಿದೆ. ಮುಖ್ಯರಸ್ತೆಯ ಇಕ್ಕೆಲಗಳಲ್ಲಿ ಹಲವು ಊರುಗಳಿಂದ ಬಂದ ವ್ಯಾಪಾರಸ್ಥರು ಅಂಗಡಿ ಮುಂಗಟ್ಟುಗಳನ್ನು ತೆರೆಯುತ್ತಿದ್ದಾರೆ. ದೇವಾಲಯದ ರಾಜಗೋಪುರ, ಮಠದ ಆವರಣದಲ್ಲಿರುವ ದೇವಾಲಯಗಳನ್ನು ಬಣ್ಣಬಣ್ಣದ ವಿದ್ಯುತ್ ದೀಪಗಳಿಂದ ಅಲಂಕಾರಗೊಳಿಸಲಾಗಿದೆ.
ಅ.2ರಂದು ಅಮಾವಸ್ಯೆ ಪ್ರಯುಕ್ತ ಬೆಳಗ್ಗೆ ಶ್ರೀ ಶಾರದಾಂಬಾ ಮಹಾಭಿಷೇಕ ನಡೆಯಲಿದೆ. ಜಗನ್ಮಾತೆ ಜಗತ್ಪ್ರಸೂತಿಕಾಲಂಕಾರದಲ್ಲಿ ಕಂಗೊಳಿಸಲಿದ್ದಾಳೆ. ಮಠದಲ್ಲಿ ವೇದ-ಪುರಾಣ-ಇತಿಹಾಸ-ಪ್ರಸ್ಥಾನತ್ರಯಭಾಷ್ಯ-ಪಾರಾಯಣ ಇತ್ಯಾದಿ ಧಾರ್ಮಿಕ ಆಚರಣೆಗಳನ್ನು ಋತ್ವಿಜರು ನೆರವೇರಿಸಲಿದ್ದಾರೆ. ಉಭಯ ಶ್ರೀಗಳಿಂದ ಶ್ರೀ ಶಾರದೆಗೆ ವಿಶೇಷ ಪೂಜೆ ನೆರವೇರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net