

ಮೈಸೂರು: ದೇಶದಲ್ಲಿ ಸನಾತನ ಹಿಂದೂ ಧರ್ಮದ ರಕ್ಷಣೆ ಮತ್ತು ತತ್ವ ಸಿದ್ಧಾಂತಗಳ ಪ್ರಚಾರಕ್ಕೆ ಹಗಲಿರುಳು ಶ್ರಮಿಸಿದ ಆದಿ ಶಂಕರಾಚಾರ್ಯರು ಸಹಸ್ರಾರು ವರ್ಷದ ಹಿಂದೆಯೇ ಹಿಂದು ರಾಷ್ಟ್ರದ ಪ್ರಾತಃ ಸ್ಮರಣೀಯ ಆಚಾರ್ಯರಾಗಿ ವೇದ ಉಪನಿಷತ್ ಶಾಸ್ತ್ರ ಮತ್ತು ಹಿಂದು ಧರ್ಮವನ್ನು ಪುನರ್ ಪ್ರತಿಪಾದಿಸಿದರು ಎಂದು ಶಾಸಕ ಟಿ.ಎಸ್.ಶ್ರೀವತ್ಸ ಹೇಳಿದರು.
ನಗರದ ಅಗ್ರಹಾರದಲ್ಲಿ ಅಭಿನವ ಶಂಕರ ನಿಲಯದ ಶಂಕರ ಮಠದಲ್ಲಿ ಶಂಕರಾಚಾರ್ಯರ ಜಯಂತ್ಯುತ್ಸವ ಅಂಗವಾಗಿ ಆಯೋಜಿಸಿದ್ದ ಶಂಕರ ರಥೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿ, ಸಮಾಜದ ಕಟ್ಟಕಡೆಯ ವ್ಯಕ್ತಿಗಳನ್ನು ಪೂಜಿಸುವವನೇ ನಿಜವಾದ ಸನ್ಯಾಸಿಯಾಗುತ್ತಾನೆ. ಅಂಥ ಕಾರ್ಯವನ್ನು ಶಂಕರರು ಮಾಡಿದ್ದರು.. ತಮ್ಮ 12ನೇ ವಯಸ್ಸಿನಲ್ಲಿಯೆ ಎಲ್ಲ ಶಾಸ್ತ್ರಗಳನ್ನು ಓದಿ ಕಾಲ್ನಡಿಗೆಯಲ್ಲಿಯೆ ದೇಶ ಸಂಚಾರ ಮಾಡಿ ಸಮಗ್ರ ಸನಾತನ ಹಿಂದು ಧರ್ಮವನ್ನು ಉಳಿಸಿ ಬೆಳೆಸಿದರು ಎಂದರು.
ಈ ಸಂದರ್ಭ ಶಂಕರ ಮಠದ ಧರ್ಮಾಧಿಕಾರಿ ರಾಮಚಂದ್ರ, ಮಠದ ವ್ಯವಸ್ಥಾಪಕ ಶೇಷಾದ್ರಿ ಭಟ್, ಮುಡಾ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್, ಸಪ್ತಮಾತ್ರಿಕ ದೇವಸ್ಥಾನದ ಧರ್ಮಾಧಿಕಾರಿ ಭಾಸ್ಕರ್, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಜಿಲ್ಲಾ ಪ್ರತಿನಿಧಿಗಳಾದ ಡಿ.ಟಿ.ಪ್ರಕಾಶ್, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯ ಸಂಘಟನಾ ಕಾರ್ಯದರ್ಶಿ ಡಾ.ಲಕ್ಷ್ಮೀದೇವಿ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯ ಉಪಾಧ್ಯಕ್ಷರಾದ ಶ್ರೀಕಂಠ ಕುಮಾರ್, ಎನ್.ಎಂ.ನವೀನ್ ಕುಮಾರ್, ನಗರ ಪಾಲಿಕೆ ಮಾಜಿ ಸದಸ್ಯ ಮ.ವಿ. ರಾಮಪ್ರಸಾದ್, ಹೊಯ್ಸಳ ಕರ್ನಾಟಕ ಸಂಘದ ಅಧ್ಯಕ್ಷ ಕೆ.ಆರ್. ಸತ್ಯನಾರಾಯಣ್, ನಿರ್ದೇಶಕರಾದ ಎಸ್.ರಂಗನಾಥ, ಬ್ರಾಹ್ಮಣ ಯುವ ವೇದಿಕೆ ಪ್ರಧಾನ ಕಾರ್ಯದರ್ಶಿ ವಿಕ್ರಮ ಅಯ್ಯಂಗಾರ್ ಹಾಗೂ ಇತರರು ಇದ್ದರು.