ಶ್ರೀ ಸತ್ಯಸಾಯಿ ಬಾಬಾ ಅವರ 95ನೇ ಜನ್ಮದಿನಾಚರಣೆ

sathya
Published on

ಕುಂಬಳೆ: ಭಗವಾನ್ ಶ್ರೀ ಸತ್ಯಸಾಯಿ ಬಾಬಾ ಅವರ 95ನೇ ಜನ್ಮದಿನ ಪ್ರಯುಕ್ತ ಸೋಮವಾರ ಶಿರಿಯ ಶ್ರೀ ಸತ್ಯಸಾಯಿ ಸೇವಾ ಸಮಿತಿ ಆಶ್ರಯದಲ್ಲಿ ಶಿರಿಯ ಸಾಯಿಮಂದಿರದಲ್ಲಿ 24 ಮಂದಿಗೆ ಅಮೃತಕಲಶ ವಿತರಿಸಲಾಯಿತು.

ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳ ಕಾಸರಗೋಡು ಜಿಲ್ಲಾಧ್ಯಕ್ಷ ಹಿರಣ್ಯ ಮಹಾಲಿಂಗ ಭಟ್, ಶಿರಿಯ ಸಮಿತಿ ಮಾಜಿ ಸಂಚಾಲಕ ಮಲಾರ್ ಜಯರಾಮ ರೈ ಮಾತನಾಡಿದರು.

ಬಾಲವಿಕಾಸ ಹಳೇ ವಿದ್ಯಾರ್ಥಿ ಹಾಗೂ ಸಾಯಿಬಂಧುಗಳ ಕೊಡುಗೆ ರೂಪದಲ್ಲಿ ನೀಡಿದ ಅಗತ್ಯ ಸಾಮಗ್ರಿಗಳ ಅಮೃತಕಲಶ(ಕಿಟ್)ವನ್ನು ಆಯ್ದ 24 ಮನೆಗಳಿಗೆ ಹಸ್ತಾಂತರಿಸಲಾಯಿತು. ಪುಟ್ಟಪರ್ತಿಯಿಂದ ತಂದ ಅರಳಿ ಗಿಡವನ್ನು ಜಿಲ್ಲಾಧ್ಯಕ್ಷರು ಶಿರಿಯ ಸಮಿತಿ ಪದಾಧಿಕಾರಿಗಳಿಗೆ ಹಸ್ತಾಂತರಿಸಿದರು.

ಜಿಲ್ಲಾ ಉಪಾಧ್ಯಕ್ಷ ರಾಮಚಂದ್ರ ಸಿ.ಉಪ್ಪಳ, ಲಕ್ಷ್ಮೀನಾರಾಯಣ ಶೆಟ್ಟಿ, ಯಶವಂತ ಆಚಾರ್ಯ, ಕೃಷ್ಣ ಶಿರಿಯ, ಶಾಂತಾರಾಮ ಶೆಟ್ಟಿ, ಮೈನಾ ಕುಂಬಳೆ, ಸಾವಿತ್ರಿ, ಸಾಯಿಭದ್ರಾ ರೈ ಮತ್ತಿತರರು ಉಪಸ್ಥಿತರಿದ್ದರು. ಶಿರಿಯ ಸಮಿತಿ ಸಂಚಾಲಕ ಲಲಿತ್‌ಕುಮಾರ್ ಮುಟ್ಟಂ ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net