ಶ್ರೀ ಸಂತೆಕಾಳೇಶ್ವರಿ, ಚಿಕ್ಕಮ್ಮದೇವಿ ದೇವರ ಪುನರ್ ಪ್ರತಿಷ್ಠಾಪನೆ

ಶ್ರೀ ಸಂತೆಕಾಳೇಶ್ವರಿ, ಚಿಕ್ಕಮ್ಮದೇವಿ ದೇವರ ಪುನರ್ ಪ್ರತಿಷ್ಠಾಪನೆ
Published on

ಬಾಗೂರು: ಭಕ್ತರು ಹಾಗೂ ದಾನಿಗಳ ಸಹಕಾರದಿಂದ ಸುಮಾರು 6ಕೋಟಿ ವೆಚ್ಚದಲ್ಲಿ ಶ್ರೀಸಂತೆಕಾಳೇಶ್ವರಿ ಹಾಗೂ ಚಿಕ್ಕಮ್ಮ ದೇವಾಲಯಗಳನ್ನು ನಿರ್ಮಾಣಮಾಡಿ ಲೋಕಾರ್ಪಣೆ ಗೊಳಿಸಿರುವುದರಿಂದ ಈ ಭಾಗದ ಭಕ್ತರಿಗೆ ಸಂತಸ ತಂದಿದೆ ಎಂದು ಶಾಸಕ ಎಚ್.ಡಿ.ರೇವಣ್ಣ ಹೇಳಿದರು.

ಹೋಬಳಿ ಕೇಂದ್ರದ ಶ್ರೀ ಸಂತೆಕಾಳೇಶ್ವರಿ ಹಾಗೂ ಚಿಕ್ಕಮ್ಮದೇವಿ ದೇವರ ಪುನರ್ ಪ್ರತಿಷ್ಠಾಪನೆ ಅಂಗವಾಗಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಹಾಸನ ಆದಿಚುಂಚನಗಿರಿ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ ಮಾತನಾಡಿ, ಕಳೆದ 7 ವರ್ಷಗಳಿಂದ ದೇವಾಲಯವನ್ನು ನಿರ್ಮಾಣ ಮಾಡಲಾಗಿದೆ ಬಾಗೂರು ಇತಿಹಾಸವುಳ್ಳ ಗ್ರಾಮವಾಗಿದೆ ಎಂದರು.

ಶಾಸಕ ಸಿ ಎನ್ ಬಾಲಕೃಷ್ಣ ಮಾತನಾಡಿ, ದೇವಾಲಯ ನಿರ್ಮಾಣಕ್ಕೆ ಮುಜರಾಯಿ ಸೇರಿದಂತೆ ವಿವಿಧ ಇಲಾಖೆಗಳ ಅನುದಾನದ ಮೂಲಕ ಸುಂದರ ದೇವಾಲಯ ನಿರ್ಮಾಣಮಾಡಲಾಗಿದೆ. ಮುಂದಿನ ದಿನಗಳಲ್ಲಿ ಒಇನ್ನಷ್ಟು ಅಭಿವೃದ್ಧಿಗೊಳಸಲಾಗುವುದು ಎಂದರು.

ವಿಶ್ವ ಒಕ್ಕಲಿಗರ ಮಠದ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಆಶೀರ್ವಚನ ನೀಡಿದರು. ವಿಧಾನಪರಿಷತ್ ಸದಸ್ಯ ಡಾ.ಸೂರಜ್ ರೇವಣ್ಣ ಮಾತನಾಡಿದರು.

ಶಾಸಕ ಎಚ್. ಪಿ.ಸ್ವರೂಪ್ ಪ್ರಕಾಶ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಬಾಗೂರು ಮಂಜೇಗೌಡ, ಉಪಾಧ್ಯಕ್ಷ ಬಿ.ಎಚ್.ಶಿವಣ್ಣ, ಕಾರ್ಯದರ್ಶಿ ದಕ್ಷಿಣ ಮೂರ್ತಿ, ಹಾಸನ ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕಿ ಕೆ.ವಿ.ವಸಂತ ಶಿವಣ್ಣ, ಹಾಸನ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೃಷ್ಣೇಗೌಡ, ತಹಸೀಲ್ದಾರ್ ನವೀನ್ ಕುಮಾರ್, ಡಿವೈಎಸ್ಪಿ ಕುಮಾರ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆಂಪೇಗೌಡ , ದೇವಾಲಯ ಶಿಲ್ಪಿ ದತ್ತಾತ್ರೇಯ, ಗುಡಿ ಗೌಡ್ರು ಬಿ.ಕೆ.ತಿಮ್ಮೇಗೌಡ್ರು, ನವೀನ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net