ರಾಯನಾಳದಲ್ಲಿ ಶ್ರೀ ರೇವಣಸಿದ್ದೇಶ್ವರ ಜಾತ್ರೆ ಮೇ 12ರಂದು

h10-rayanal
Published on

ಹುಬ್ಬಳ್ಳಿ: ತಾಲೂಕಿನ ರಾಯನಾಳದ ಶ್ರೀ ರೇವಣಸಿದ್ದೇಶ್ವರ ವಿರಕ್ತ ಸಂಸ್ಥಾನ ಮಠದ ಜಾತ್ರಾ ಮಹೋತ್ಸವವನ್ನು ಮೇ 12ರಂದು ಏರ್ಪಡಿಸಲಾಗಿದೆ.

ಅಂದು ಸಂಜೆ 5ಕ್ಕೆ ಶ್ರೀ ರೇವಣಸಿದ್ದೇಶ್ವರ ರಥೋತ್ಸವ ನಡೆಯಲಿದ್ದು, ಶ್ರೀ ಅಭಿನವ ರೇವಣಸಿದ್ದೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಬೆಳಗ್ಗೆ ಕರ್ತೃ ಗದ್ದುಗೆ ಮಹಾರುದ್ರಾಭಿಷೇಕ ಹಾಗೂ ವಿಶೇಷ ಅಲಂಕಾರ ಸೇವೆ ನಡೆಯಲಿದೆ. ಮೇ 13ರಂದು ಪಲ್ಲಕ್ಕಿ ಉತ್ಸವ, 14ಕ್ಕೆ ಗ್ರಾಮ ದೇವತೆ ಬೀಳ್ಕೊಡುಗೆ, 15 ಮತ್ತು 16ರಂದು ಜಾತ್ರೆ ನಿಮಿತ್ತ ಕುಸ್ತಿ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net