

ಲಕ್ಷೆ್ಮೕಶ್ವರ: ವೀರಶೈವ ಧರ್ಮ ಸಂಸ್ಥಾಪಕರು ಮತ್ತು ಮಾನವಧರ್ಮ ಉದ್ಧಾರಕ್ಕಾಗಿ ಅವತಾರವೆತ್ತಿದ ಜ. ಶ್ರೀ ರೇಣುಕಾಚಾರ್ಯರ ತತ್ವ-ಸಿದ್ಧಾಂತಗಳನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಮುಖ್ಯ ಶಿಕ್ಷಕಿ ಎನ್.ವಿ. ಕುಲಕರ್ಣಿ ಹೇಳಿದರು.
ತಾಲೂಕಿನ ಶಿಗ್ಲಿ ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ರೇಣುಕಾಚಾರ್ಯ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿದರು.
ವೀರಣ್ಣ ಪವಾಡದ ಮಾತನಾಡಿ, ದೇವರ ಸ್ವರೂಪಿಯಾದ ಜಗದ್ಗುರು ರೇಣುಕಾಚಾರ್ಯರ ತತ್ವ, ಸಿದ್ಧಾಂತಗಳನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು. ಶಿಕ್ಷಕರಾದ ಆರ್.ಡಿ. ಕಾಲಾಯಗರ, ಆರ್.ಡಿ. ಕಪ್ಪತ್ತನವರ. ಎಲ್.ತಿಪ್ಪನಾಯಕ, ದೀಪಾ ಭೇಸ್ಮೆ, ನೇತ್ರಾ ಬದಾಮಿ, ವಿದ್ಯಾರ್ಥಿಗಳು ಇದ್ದರು. ಎಸ್.ಬಿ. ಅಣ್ಣಿಗೇರಿ ಕಾರ್ಯಕ್ರಮ ನಿರ್ವಹಿಸಿದರು.
ಲಕ್ಷೆ್ಮೕಶ್ವರ ತಾಲೂಕಿನ ಎಲ್ಲ ಸರ್ಕಾರಿ ಕಚೇರಿ, ಶಾಲಾ-ಕಾಲೇಜ್ಗಳಲ್ಲಿ ರೇಣುಕಾಚಾರ್ಯರ ಜಯಂತಿ ಆಚರಿಸಲಾಯಿತು.