ಶ್ರೀ ರೇಣುಕಾ ಯಲ್ಲಮ್ಮ ದೇವಿ ಜಾತ್ರಾ ಸಂಭ್ರಮ

15 Dwd 1A
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಇಲ್ಲಿನ ಹಳಿಯಾಳ ರಸ್ತೆಯ ಬಸವನಗರದ ಶ್ರೀ ರೇಣುಕಾ ಯಲ್ಲಮ್ಮ ದೇವಿ ದೇವಸ್ಥಾನದ 5ನೇ ಜಾತ್ರಾ ಮಹೋತ್ಸವ ಮಂಗಳವಾರ ಸಂಭ್ರಮದಿAದ ಜರುಗಿತು. ಶ್ರೀ ಚನ್ನಬಸವಯ್ಯ ಶಾಸ್ತಿçಗಳ ನೇತೃತ್ವದಲ್ಲಿ ಪ್ರಾತಃಕಾಲ ಅಮ್ಮನವರಿಗೆ ರುದ್ರಾಭಿಷೇಕ, ಕುಂಭಾಭಿಷೇಕ, 6.30ಕ್ಕೆ ಹೂವಿನ ಅಲಂಕಾರ, 7 ಗಂಟೆಗೆ ಮಹಾಮಂಗಳಾರತಿ, ಉಡಿ ತುಂಬುವುದು, ಪಡ್ಡಲಗಿ ಸೇವೆ ಜರುಗಿತು. ನಂತರ ಪೂರ್ಣಕುಂಭ, ಆರತಿ ಮತ್ತು ಪಲ್ಲಕ್ಕಿಯೊಂದಿಗೆ ದೇವಿಯ ಶೋಭಾಯಾತ್ರೆ ಜರುಗಿತು. ಬಳಿಕ ಭಕ್ತರಿಗೆ ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಸಂಜೆ ಅಮ್ಮನವರಿಗೆ ವಿಶೇಷ ಪೂಜೆ ಮತ್ತು ಮಹಾಮಂಗಳಾರತಿ ಮಾಡಲಾಯಿತು.

ಶ್ರೀ ರೇಣುಕಾ ಯಲ್ಲಮ್ಮ ದೇವಿ ದೇವಸ್ಥಾನ ಸಮಿತಿ ಮತ್ತು ಶ್ರೀ ವೀರಭದ್ರೇಶ್ವರ ಆದರ್ಶ ಸಂಘದ ಪದಾಽಕಾರಿಗಳು, ಬಸವನಗರ, ಸುತ್ತಲಿನ ಭಕ್ತರು ಪಾಲ್ಗೊಂಡು ದೇವಿಯ ಕೃಪೆಗೆ ಪಾತ್ರರಾದರು.

ಜಾತ್ರೆಯ ಅಂಗವಾಗಿ ಏ. 13 ಮತ್ತು 14ರಂದು ಸಂಜೆ 7.30 ಗಂಟೆಗೆ ಹುಣಸಿಕಟ್ಟೆಯ ಶ್ರೀ ಬಸವರಾಜ ದೇವರು ಅವರಿಂದ ಪುರಾಣ ಪ್ರವಚನ ಜರುಗಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net