ಭಟ್ಕಳ ವಡೇರ ಮಠದಲ್ಲಿ ಶ್ರೀರಾಮನಾಮ ಜಪ ಅಭಿಯಾನ ಯಶಸ್ವಿ

BKL RAM NAM
Published on

ಭಟ್ಕಳ: ಪಟ್ಟಣದ ವೀರ ವಿಠ್ಠಲ್ ರಸ್ತೆಯಲ್ಲಿರುವ ವಡೇರ ಮಠದಲ್ಲಿ ಆಷಾಢ ಏಕಾದಶಿ ಪ್ರಯುಕ್ತ ಜಿಎಸ್​ಬಿ ಮಹಿಳಾ ಮಂಡಳಿ ಮತ್ತು ಸರಸ್ವತಿ ಭಜನಾ ಮಂಡಳಿ ಇದರ ಸಹಯೋಗದಲ್ಲಿ ವಿಶೇಷ ಶ್ರೀ ರಾಮನಾಮ ಜಪ ಅಭಿಯಾನ ಯಶಸ್ವಿಗೊಂಡಿದೆ.

ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಮಠದ 550ನೇ ವರ್ಷದ ಸವಿನೆನಪಿಗಾಗಿ ಶ್ರೀ ಗೋಕರ್ಣ ಪರ್ತಗಾಳಿ ಮಠಾಧೀಶರಾದ ಶ್ರೀ ಮದ್ ವಿದ್ಯಾಧೀಶ ತೀರ್ಥ ಪಾದ ವಡೇರ ಸ್ವಾಮೀಜಿಯವರು 550 ದಿನ 550 ಕೋಟಿ ಶ್ರೀ ರಾಮನಾಮ ಜಪ ಅಭಿಯಾನಕ್ಕೆ ಕಳೆದ ವರ್ಷ ಚಾಲನೆ ನೀಡಿದ್ದರು. ಆಷಾಢ ಏಕಾದಶಿ ಪ್ರಯುಕ್ತ ಭಟ್ಕಳದ ವಡೇರ ಮಠದಲ್ಲಿ ವಿಶೇಷ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು. ಬೆಳಿಗ್ಗೆ 8 ಗಂಟೆಗೆ ಶ್ರೀ ದೇವತಾ ಪ್ರಾರ್ಥನೆಯೊಂದಿಗೆ ಶ್ರೀ ರಾಮನಾಮ ಜಪ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಬೆಳಗ್ಗೆ ಆರಂಭಗೊಂಡ ಶ್ರೀ ರಾಮನಾಮ ಜಪದ ಅಭಿಯಾನ ಸಂಜೆ 7 ಗಂಟೆಯವರೆಗೆ ನಿರಂತರ ನಡೆಯಿತು. ನಂತರ ಸರಸ್ವತಿ ಭಜನಾ ಮಂಡಳದ ಸದಸ್ಯರು ಭಜನೆ ಹಾಡಿದರು. ಬಳಿಕ ಶ್ರೀ ದೇವರ ವಸಂತ ಪೂಜೆ ನಡೆದು ಫಲಾಹಾರ, ಪ್ರಸಾದ ವಿತರಿಸಲಾಯಿತು.

ಹನುಮಂತ ಪೈ ಕುಟುಂಬ, ಡಾ. ವಿನುತಾ, ಡಾ. ವಿಶ್ವನಾಥ ದಂಪತಿ, ಶ್ರೀ ವೀರವಿಠ್ಠಲ ಭಜನಾ ಮಂಡಳಿ ವತಿಯಿಂದ ಸೇವೆ ನಡೆದಿದೆ. ಶ್ರೀ ರಾಮನಾಮ ಜಪ ಅಭಿಯಾನದಲ್ಲಿ ನೂರಾರು ಸಂಖ್ಯೆಯ ಸಮಾಜ ಬಾಂಧವರು ಭಾಗವಹಿಸಿ ರಾಮನಾಮ ಜಪಿಸಿದರು. ವೈದಿಕ ವೃಂದದವರು ಸಹಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net