

ಗಂಗಾವತಿ: ತಾಲೂಕಿನ ಶ್ರೀರಾಮನಗರದ 6ನೇ ವಾರ್ಡ್ ಶ್ರೀ ವೆಂಕಟೇಶ್ವರ ದೇವಾಲಯದ 25ನೇ ವಾರ್ಷಿಕೋತ್ಸವ ನಿಮಿತ್ತ ಶ್ರೀ ಕಲ್ಯಾಣೋತ್ಸವ ಬುಧವಾರ ಜರುಗಿತು.
ಬೆಳಗ್ಗೆಯಿಂದಲೇ ದೇವಾಲಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಮೂರ್ತಿಗೆ ಪಂಚಾಮೃತಾಭಿಷೇಕ, ಗಂಧಲೇಪನ, ಹೂವಿನ ಅಲಂಕಾರ, ಪಾರಾಯಣ, ಭಜನೆ, ಕಲ್ಯಾಣೋತ್ಸವ, ನೈವೇದ್ಯ, ಮಹಾಮಂಗಳಾರತಿ ಮತ್ತು ಅನ್ನಸಂತರ್ಪಣೆ ಜರುಗಿತು. ಜ್ಞಾನ ಮಂದಿರದ ಮುಖ್ಯಸ್ಥ ಬೇವಿನಾಳ್ ಪ್ರಲ್ಹಾದಾಚಾರ್ ಪೌರೋಹಿತ್ಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಿದವು.
ದೇವಸ್ಥಾನ ಸಮಿತಿ ಪದಾಧಿಕಾರಿಗಳಾದ ಡಾ.ಗುರುರಾಜ್ ಅಯೋಧ್ಯಾ, ಹನುಮಂತರಾವ್ ಕುಲ್ಕರ್ಣಿ, ಸತ್ಯನಾರಾಯಣ ದೇಶಪಾಂಡೆ, ಶ್ರೀಕೃಷ್ಣದೇವರಾಯ, ಅರುಣಕುಮಾರ, ವೆಂಕಟೇಶ ಗದಗಕರ್, ಚಂದ್ರಕಾಂತ ಆಲ್ಲಂಪಲ್ಲಿ, ಗೋಪಾಲ ಹೇರೂರು,ವೆಂಕಟೇಶ ಮುಜುಂದಾರ್, ನರೇಶ ಜೋಶಿ, ರವೀಂದ್ರ, ಭಾರತೀಶ, ರಾಮಕೃಷ್ಣ ಜಹಾಗೀರದಾರ್, ಗುರುರಾಜ್ ಹೆಬ್ಬಾಳ, ಪವನ, ನಯನಾ ದೇವೇಂದ್ರ ದೇಸಾಯಿ, ರುಕ್ಮಿಣಿ ಗೋಪಾಲ ದೇಶಪಾಂಡೆ, ಶ್ರೀನಿವಾಸ ಮುಕ್ಕುಂದಿ, ಭೀಮಣ್ಣ, ರಮೇಶ ಕುಲ್ಕರ್ಣಿ, ಶ್ರೀನಿವಾಸ ಕೌಶಿಕ, ಅರ್ಚಕ ನಾರಾಯಣಾಚಾರ್ ಡಬೇರ್ ಇತರರಿದ್ದರು.
ವೆಂಕಟಗಿರಿ: ತಾಲೂಕಿನ ವೆಂಕಟಗಿರಿಯ ಐತಿಹಾಸಿಕ ಪ್ರಸಿದ್ಧ ಶ್ರೀಲಕ್ಷ್ಮಿ ವೆಂಕಟೇಶ್ವರ ದೇವಾಲಯದಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ ನಡೆಯಿತು. ದೇವಾಲಯದಲ್ಲಿನ ಮೂರ್ತಿಗಳಿಗೆ ಅಭಿಷೇಕ, ಹೂವಿನ ಅಲಂಕಾರ, ಪಾರಾಯಣ, ಭಜನೆ ಮತ್ತು ಪ್ರಸಾದ ವಿತರಣೆ ಜರುಗಿತು. ಕೊಪ್ಪಳದ ಪಂ.ರಘು ಪ್ರೇಮಾಚಾರ್ ಮುಳಗುಂದ್ ಪೌರೋಹಿತ್ಯದಲ್ಲಿ ಕಲ್ಯಾಣೋತ್ಸವ ಜರುಗಿತು.
ಮುಖಂಡರಾದ ಶಿರಿಗೇರಿ ಬದರಿನಾರಾಯಣ, ಶಿರಿಗೇರಿ ಭವಾನಿಪ್ರಸಾದ, ಜಗನ್ನಾಥ, ಶ್ರೀನಿವಾಸ ದೇಸಾಯಿ, ಯಂಕಪ್ಪ ಕಟ್ಟಿಮನಿ ಇತರರಿದ್ದರು.