ಶ್ರೀ ರಾಮಲಿಂಗೇಶ್ವರ ರಥೋತ್ಸವ ಅದ್ದೂರಿ

mdl jatre
ಮುದಗಲ್‌ನಲ್ಲಿ ಐತಿಹಾಸಿಕ ಶ್ರೀ ರಾಮಲಿಂಗೇಶ್ವರ ಮಹಾರಥೋತ್ಸವ ಭಾನುವಾರ ಅದ್ದೂರಿಯಾಗಿ ಜರುಗಿತು.
Published on

ಮುದಗಲ್: ಪಟ್ಟಣದ ಐತಿಹಾಸಿಕ ಶ್ರೀ ರಾಮಲಿಂಗೇಶ್ವರ ಜಾತ್ರೋತ್ಸವ ನಿಮಿತ್ತ ಭಾನುವಾರ ಸಂಜೆ ಸಹಸ್ರಾರು ಭಕ್ತರ ಮಧ್ಯೆ ರಥೋತ್ಸವ ಅದ್ದೂರಿಯಾಗಿ ಜರುಗಿತು.

ಇದಕ್ಕೂ ಮುನ್ನ ಉತ್ಸವ ಮೂರ್ತಿಯನ್ನು ರಥದವರೆಗೆ ಮೆರವಣಿಗೆ ನಡೆಸಿ ರಥೋತ್ಸವದಲ್ಲಿ ಪ್ರತಿಷ್ಠಾಪಿಸಲಾಯಿತು. ಬಳಿಕ ಆರಂಭವಾದ ಮಹಾರಥೋತ್ಸವದಲ್ಲಿ ಭಕ್ತರು ಇಷ್ಟಾರ್ಥ ಸಿದ್ಧಿಗಾಗಿ ಬಾಳೆಹಣ್ಣು, ಕಬ್ಬು, ಉತ್ತತ್ತಿ ಸಮರ್ಪಣೆ ಮಾಡಿದರು. ಸಂತೆಕೆಲ್ಲೂರಿನ ಗುರುಬಸವ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು.

ನಂದವಾಡಗಿಯ ಅಭಿನವ ಚನ್ನಬಸವ ಶ್ರೀಗಳು, ರಾಮಲಿಂಗೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಸುರೇಂದ್ರಗೌಡ ಪಾಟೀಲ್, ಲಿಂಗಪ್ಪ ಹಣಗಿ, ಶಿವಾನಂದ ಸುಂಕದ, ಮಹೇಶ ವಸ್ತ್ರದ್, ಅನಿಲ್ ಬುಶೆಟ್ಟಿ, ಚಂದ್ರಶೇಖರ ಗಂಗಾವತಿ, ಕಾಳಪ್ಪ ಪತ್ತಾರ, ವಿಜಯಕುಮಾರ್ ಪಾಟೀಲ್ ಇತರರು ಪಾಲ್ಗೊಂಡಿದ್ದರು.

501 ಪೂರ್ಣಕುಂಭ ಮೆರವಣಿಗೆ: ಪಟ್ಟಣದ ಕಿಲ್ಲಾದ ಶ್ರೀ ರಾಮಲಿಂಗೇಶ್ವರ ಜಾತ್ರೆ ನಿಮಿತ್ತ ಭಾನುವಾರ ವಿವಿಧ ಕಲಾ ತಂಡಗಳೊಂದಿಗೆ ಮಹಿಳೆಯರಿಂದ 501 ಪೂರ್ಣಕುಂಭ ಮೆರವಣಿಗೆ ಅದ್ದೂರಿಯಾಗಿ ಜರುಗಿತು.

ಬೆಳಗ್ಗೆ ಅರ್ಚಕ ಸದಾನಂದ ಹಿರೇಮಠ ನೇತೃತ್ವದಲ್ಲಿ ರಾಮಲಿಂಗೇಶ್ವರ ಮೂರ್ತಿಗೆ ರುದ್ರಾಭಿಷೇಕ, ಬಿಲ್ವಾರ್ಚನೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು. ಹಳೇಪೇಟೆಯ ರಾಮಲಿಂಗೇಶ್ವರ ದೇವಸ್ಥಾನದಿಂದ ಕಳಸ ಹಾಗೂ ಕುಂಬಾರಪೇಟೆ ಬಸವೇಶ್ವರ ದೇವಸ್ಥಾನದಿಂದ 501 ಪೂರ್ಣಕುಂಭಗಳ ಮೆರವಣಿಗೆ ನಡೆಸಲಾಯಿತು. ಆಮದಿಹಾಳದ ಲಂಕೆಪ್ಪ ಭಜಂತ್ರಿ ಅವರ ಕಣಿ ಹಲಗೆ ಮೇಳದ ವಾದ್ಯ, ಎಸ್‌ವಿಎಂ ಪ್ರೌಢಶಾಲೆಯ ಬ್ಯಾಂಜೋ ಪ್ರದರ್ಶನ ಹಾಗೂ ಮೇಗಳಪೇಟೆ, ಕನ್ನಾಪುರ ಹಟ್ಟಿಯ ಡೊಳ್ಳು ಕುಣಿತ ನೋಡುಗರ ಗಮನ ಸೆಳೆಯಿತು. ಪ್ರಮುಖರಾದ ಚಂದ್ರಶೇಖರ ಗಂಗಾವತಿ, ವೀರಭದ್ರಪ್ಪ ಗುಡೂರು, ಶರಣಪ್ಪ ಸಜ್ಜನ್, ಅಮರೇಶ ಅಂಗಡಿ, ಶರಣಪ್ಪ ಚಿತ್ರನಾಳ, ಮಲ್ಲಪ್ಪ ಮಾಟೂರು, ವೀರೇಶ ಖೇಣೇದ, ಶಂಭುಲಿಂಗಪ್ಪ ಸುಂಕದ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net