ಶ್ರೀ ರಾಮಲಿಂಗೇಶ್ವರ ನೂತನ ರಥದ ಮೆರವಣಿಗೆ

25 Dwd 1
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ತಾಲೂಕಿನ ಮರೇವಾಡ ಗ್ರಾಮದಲ್ಲಿ ಶ್ರೀ ರಾಮಲಿಂಗೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವದ ಅಂಗವಾಗಿ ಮಂಗಳವಾರ ನೂತನ ರಥದ ಮೆರವಣಿಗೆ ಅದ್ಧೂರಿಯಿಂದ ಜರುಗಿತು. ನೂತನ ರಥಕ್ಕೆ ಗ್ರಾಮದ ದ್ವಾರ ಬಾಗಿಲ ಬಳಿ ಪೂಜೆ ನೆರವೇರಿಸಲಾಯಿತು. ನಂತರ ರಥದೊಂದಿಗೆ ನಂದಿಕೋಲು, ಪಲ್ಲಕ್ಕಿ ಉತ್ಸವದ ಮೆರವಣಿಗೆಗೆ ಕುಂಭ ಹೊತ್ತ ಮಹಿಳೆಯರು, ಕರಡಿ ಮಜಲುಗಳು ಮೆರಗು ತಂದವು.

ದ್ವಾರ ಬಾಗಿಲಿನಿಂದ ಆರಂಭವಾದ ರಥದ ಮೆರವಣಿಗೆ ಶ್ರೀ ಬಸವೇಶ್ವರ ದೇವಸ್ಥಾನಕ್ಕೆ ಬಂದಿತು. ಅಲ್ಲಿಂದು ಬಸವೇಶ್ವರ ಪ್ಲಾಟ್ ಓಣಿ, ಪೂಜಾರ ಓಣಿ, ಅಗಸರ ಓಣಿ, ಜನತಾ ಪ್ಲಾಟ್ ಸೇರಿ ವಿವಿಧ ಓಣಿಗಳ ಮೂಲಕ ಸಾಗಿ ಶ್ರೀ ರಾಮಲಿಂಗೇಶ್ವರ ದೇವಸ್ಥಾನ ತಲುಪಿ ಸಂಪನ್ನಗೊ0ಡಿತು. ಮಾ. 1ರಂದು ರಥೋತ್ಸವ ಜರುಗಲಿದೆ ಎಂದು ದೇವಸ್ಥಾನ ಮಂಡಳಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net