

ಕಡಬ: ವಿಶ್ವ ಹಿಂದು ಪರಿಷತ್ ಮತ್ತು ಮೊಸರು ಕುಡಿಕೆ ಉತ್ಸವ ಸಮಿತಿಯ ಆಶ್ರಯದಲ್ಲಿ, ರಾಮಕೃಷ್ಣ ಭಟ್ ಸ್ಮರಣಾರ್ಥ ಪ್ರೌಢಶಾಲಾ ಬಾಲಕರ ಮ್ಯಾಟ್ ಅಂಕಣದ ಕಬಡ್ಡಿ ಪಂದ್ಯಾಟ ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವರ ಗದ್ದೆಯಲ್ಲಿ ಇತ್ತೀಚೆಗೆ ನಡೆಯಿತು.
ಈ ಪಂದ್ಯಾಟದಲ್ಲಿ ಶ್ರೀರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆಯ ಬಾಲಕರ ತಂಡ ಪ್ರಥಮ ಸ್ಥಾನ ಪಡೆದುಕೊಂಡಿತು. ತಂಡದ ಮಹಾಂತೇಶ್ ಬೆಸ್ಟ್ ರೈಡರ್ ಹಾಗೂ ಅಜಯ್ ಬೆಸ್ಟ್ ಡಿಫೆಂಡರ್ ಪ್ರಶಸ್ತಿ ಪಡೆದುಕೊಂಡರು. ವಿದ್ಯಾರ್ಥಿಗಳಿಗೆ ಮಾಧವ ಬಿ.ಕೆ., ಜಸ್ವಂತ್ ಹಾಗೂ ಮಂಜುನಾಥ್ ತರಬೇತಿ ನೀಡಿದ್ದರು. ಮುಖ್ಯಶಿಕ್ಷಕ ಸತೀಶ್ ಭಟ್, ದೈಹಿಕ ಶಿಕ್ಷಣ ಶಿಕ್ಷಕಿ ಪ್ರಫುಲ್ಲಾ ರೈ ಮಾರ್ಗದರ್ಶನ ನೀಡಿದ್ದರು.