

ವಿಜಯವಾಣಿ ಸುದ್ದಿಜಾಲ ಧಾರವಾಡ
ಸ್ವಾಮಿ ವಿವೇಕಾನಂದರು ಸನಾತನ ಧರ್ಮದ ಮಹತ್ವವನ್ನು ಜಗತ್ತಿಗೆ ತಿಳಿಸಿಕೊಟ್ಟರು ಪ್ರತಿಯೊಬ್ಬ ಭಾರತೀಯ ತನ್ನ ಧರ್ಮವನ್ನು ಪ್ರೀತಿಸಬೇಕು, ಎಲ್ಲ ಧರ್ಮಗಳನ್ನು ಗೌರವಿಸಬೇಕು ಎಂದು ಹುಧಾ ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಹೇಳಿದರು.
ಇಲ್ಲಿನ ಸಿ.ಬಿ. ನಗರದ ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ಶನಿವಾರ ಸಂಜೆ ಆಯೋಜಿಸಿದ್ದ ಶ್ರೀ ರಾಮಕೃಷ್ಣ- ಸ್ವಾಮಿ ವಿವೇಕಾನಂದ ಸ್ಮರಣೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ದೇಶದ ಸಂತ ಮಹಾತ್ಮರು ಧರ್ಮವನ್ನು ಉಳಿಸುವಂಥ ಕೆಲಸ ಮಾಡಿದ್ದಾರೆ. ರಆಮಕೃಷ್ಣ ವಿವೇಕಾನಂದ ಆಶ್ರಮವು ಮಂದಿರದ 20ನೇ ವಾರ್ಷಿಕೋತ್ಸವದ ಪ್ರಯುಕ್ತ ಯುವ ಸಮ್ಮೇಳನ, ಶಿಕ್ಷಕರ ಸಮ್ಮೇಳನ ಹಾಗೂ ಭಕ್ತ ಸಮ್ಮೇಳನಗಳನ್ನು ಆಯೋಜಿಸಿರುವುದು ಶ್ಲಾಘನೀಯ ಎಂದರು.
ಖ್ಯಾತ ಉದ್ಯಮಿ ಡಾ. ಸಿಎಚ್. ವಿ.ಎಸ್.ವಿ. ಪ್ರಸಾದ್ ಮಾತನಾಡಿ, ಆಶ್ರಮವು 25 ವರ್ಷಗಳಿಂದ ಅತ್ಯಮೂಲ್ಯ ಸೇವೆ ಸಲ್ಲಿಸುತ್ತ ಬಂದಿದೆ. ಹುಬ್ಬಳ್ಳಿಯ ರೈಲು ನಿಲ್ದಾಣದಲ್ಲಿ ಸ್ವಾಮಿ ವಿಜಯಾನಂದ ಸರಸ್ವತಿಯವರ ನೇತೃತ್ವದಲ್ಲಿ ಸ್ವಾಮಿ ವಿವೇಕಾನಂದರ ಪುತ್ಥಳಿ ನಿರ್ಮಿಸಲಾಗಿದೆ. ಅದರಿಂದ ನಾನು ಪ್ರತಿದಿನ ಸ್ಪೂರ್ತಿ ಪಡೆಯುತ್ತೇನೆ ಎಂದರು.
ಸ್ವಾಮಿ ಮಹಾಮೇದಾನಂದಜಿ ಮಹಾರಾಜರು `ಮನುಕುಲದ ಮಹಾನ್ ಗುರು ಶ್ರೀ ರಾಮಕೃಷ್ಣರು' ವಿಷಯ ಕುರಿತು ಮಾತನಾಡಿದರು. ತುಮಕೂರಿನ ಸ್ವಾಮಿ ವೀರೇಶಾನಂದ ಸರಸ್ವತಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಸ್ವಾಮಿ ವಿಜಯಾನಂದ ಸರಸ್ವತಿ ಅಧ್ಯಕ್ಷತೆ ವಹಿಸಿದ್ದರು. ಡಿಸಿಪಿ ಸಿ.ಆರ್. ರವೀಶ, ಹೋಟೆಲ್ ಉದ್ಯಮಿ ಶ್ರೀಶ ಪುರಾಣಿಕ ಅತಿಥಿಗಳಾಗಿ ಪಾಲ್ಗೊಂಡಿದ್ದರು.
ನAತರ ರಾಘವಿ ರಾಹುಲ್ ಹಣಮನಗಸಿ `ಕಿತ್ತೂರು ರಾಣಿ ಚೆನ್ನಮ್ಮ' ಏಕಪಾತ್ರಾಭಿನಯ ಪ್ರಸ್ತುತಪಡಿಸಿದಳು. ತಡಕೋಡದ ರಾಮಕೃಷ್ಣ ವಿವೇಕಾನಂದ ಆಶ್ರಮದ ವಂದೇ ಮಾತರಂ ಗುರುಕುಲದ ಮಕ್ಕಳು `ವಂದೇ ಭಾರತ ಮಾತರಂ' ನಾಟಕ ಪ್ರಸ್ತುತಪಡಿಸಿದರು.