ಸಾಲ ಸಂರಕ್ಷಣೆ ಜೀವ ವಿಮಾ ಪಾಲಿಸಿ ಸೌಲಭ್ಯ, ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಸಹಯೋಗ

mng_28feb ramakrishna
ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಸಂಸ್ಥೆ ಮತ್ತು ಶ್ರೀ ರಾಮ್ ಲೈಫ್ ಇನ್ಶೂರೆನ್ಸ್ ಕಂಪನಿಯ ಸಹಯೋಗದೊಂದಿಗೆ ತನ್ನ ಸಾಲಗಾರ ಸದಸ್ಯರಿಗೆ ಸಾಲ ಸಂರಕ್ಷಣೆ ಜೀವ ವಿಮಾ ಪಾಲಿಸಿ ಸೌಲಭ್ಯ ಸಮಾರಂಭ ಸಂಘದ ಅಧ್ಯಕ್ಷ ಕೆ.ಜೈರಾಜ್ ಬಿ.ರೈ ನೇತೃತ್ವದಲ್ಲಿ ನಡೆಯಿತು. ಪ್ರಮುಖರಾದ ಆದೇಶ್ ಅರಮನೆ ತೋಟ, ಪಿಠಲ ಪಿ.ಶೆಟ್ಟಿ, ಎಂ.ರಾಮಯ ಶೆಟ್ಟಿ, ಪಿ.ಬಿ.ದಿವಾಕರ ರೈ, ಡಾ.ಬಿ.ಸಂಜೀವ ರೈ ಮತ್ತಿತರರಿದ್ದರು.
Published on

ಮಂಗಳೂರು: ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಸಂಸ್ಥೆ ಮತ್ತು ಶ್ರೀ ರಾಮ್ ಲೈಫ್ ಇನ್ಶೂರೆನ್ಸ್ ಕಂಪನಿ ಸಹಯೋಗದೊಂದಿಗೆ ತನ್ನ ಸಾಲಗಾರ ಸದಸ್ಯರಿಗೆ ಸಾಲ ಸಂರಕ್ಷಣೆ ಜೀವ ವಿಮಾ ಪಾಲಿಸಿ ಸೌಲಭ್ಯ ಸಮಾರಂಭ ಸಂಘದ ಅಧ್ಯಕ್ಷ ಕೆ.ಜೈರಾಜ್ ಬಿ.ರೈ ನೇತೃತ್ವದಲ್ಲಿ ನಡೆಯಿತು.

ಸಂಘದ ಸಾಲಗಾರ ಸದಸ್ಯರು ನಿಧನರಾದರೆ ಈ ಸೌಲಭ್ಯದಿಂದ ಅವರ ಬಾಕಿ ಇರುವ ಸಾಲವು ವಿಮೆಯ ಮೂಲಕ ಪಾವತಿಯಾಗುವುದಲ್ಲದೆ, ಹೆಚ್ಚುವರಿ ವಿಮಾ ಮೊಬಲಗು ಅವರ ಉತ್ತರಾಧಿಕಾರಿಗಳಿಗೆ ಲಭಿಸುವುದು. ಇದರಿಂದ ಸಾಲಗಾರರ ನಿಧನ ನಂತರ ಅವರ ಕುಟುಂಬಕ್ಕೆ ಸಾಲ ಮರುಪಾವತಿ ಹೊರೆ ಇರುವುದಿಲ್ಲ. ಈ ಸೌಲಭ್ಯದಡಿ 50 ವಯಸ್ಸಿನವರೆಗಿನ ಸಾಲಗಾರರಿಗೆ ಅವರು ಪಡೆಯುವ 14 ಲಕ್ಷ ರೂ.ವರೆಗಿನ ಮೊಬಲಗಿನ ಸಾಲಕ್ಕೆ ಈ ಸೌಲಭ್ಯದ ವಿಮಾ ಸಂರಕ್ಷಣೆ ದೊರಕುತ್ತದೆ.

ಶ್ರೀರಾಮ್ ಲೈಫ್ ಇನ್ಶೂರೆನ್ಸ್ ಕಂಪನಿಯ ಕರ್ನಾಟಕ ರಾಜ್ಯ ಮುಖ್ಯಸ್ಥ ಆದೇಶ್ ಅರಮನೆ ತೋಟ, ಸಂಘದ ನಿರ್ದೇಶಕರಾದ ಪಿಠಲ ಪಿ.ಶೆಟ್ಟಿ, ಎಂ.ರಾಮಯ ಶೆಟ್ಟಿ, ಪಿ.ಬಿ.ದಿವಾಕರ ರೈ, ಡಾ.ಬಿ.ಸಂಜೀವ ರೈ ಮತ್ತು ವಿಮಾ ಕಂಪನಿಯ ಅಧಿಕಾರಿಗಳಾದ ನಂದಕುಮಾರ್, ವಿಜಯ ಕಾರ್ತಿಕ್, ಕೃಷ್ಣ ಪ್ರಭು, ಸಂಘದ ಕೇಂದ್ರ ಕಚೇರಿ ಸಿಬ್ಬಂದಿ, ಎಲ್ಲ ಶಾಖಾಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

ಸಂಘದ ಸಿಬ್ಬಂದಿ ಕಾವ್ಯಶ್ರೀ ಪ್ರಾರ್ಥಿಸಿದರು. ಶಾಖಾಧಿಕಾರಿ ತಿಮ್ಮಯ್ಯ ಶೆಟ್ಟಿ ವಂದಿಸಿದರು. ಮಹಾಪ್ರಬಂಧಕ ಗಣೇಶ್ ಜಿ.ಕೆ. ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net