ಶ್ರೀರಾಮನ ಆದರ್ಶ ರೂಢಿಯಾಗಲಿ

2
ಸವದತ್ತಿಯಲ್ಲಿ ಡಾ.ನಯನಾ ಭಸ್ಮೆ ಶ್ರೀರಾಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಎಸ್.ಸಿ.ಮಠಪತಿ, ಡಾ.ಹೇಮಂತ ಭಸ್ಮೆ ಇತರರಿದ್ದರು.
Published on

ಸವದತ್ತಿ: ಯುವಕರು ರಾಮನ ಆದರ್ಶ ರೂಢಿಸಿಕೊಳ್ಳಬೇಕು ಎಂದು ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಡಾ.ನಯನಾ ಭಸ್ಮೆ ಹೇಳಿದರು.

ಇಲ್ಲಿನ ಬಸವೇಶ್ವರ ಬಡಾವಣೆಯಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ನಿಮಿತ್ತ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ರಾಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಮಹನೀಯರ ತ್ಯಾಗ, ಬಲಿದಾನದಿಂದ ರಾಮ ಮಂದಿರ ನಿರ್ಮಾಣವಾಗಿದ್ದು, ದೇಶ ವಿಶ್ವಗುರುವಾಗಲು, ಸಂಸ್ಕೃತಿ, ಸಂಸ್ಕಾರ ಗಟ್ಟಿಯಾಗಿರಬೇಕು. ಯುವಕರು ದೇಶ ಮುನ್ನಡೆಸಬೇಕು ಎಂದರು.

ಎಸ್.ಸಿ.ಮಠಪತಿ ಮಾತನಾಡಿ, ರಾಮಮಂದಿರಕ್ಕೆ ಐತಿಹಾಸಿಕ ಇತಿಹಾಸವಿದ್ದು, ರಾಮನಾಮ ಜಪದಿಂದ ಪಾಪಗಳೆಲ್ಲ ಪರಿಹಾರವಾಗುತ್ತವೆ ಎಂದರು. ಡಾ.ಹೇಮಂತ ಭಸ್ಮೆ, ರಾಜು ಚಿನಗುಡಿ, ಬಾಳಕೃಷ್ಣ ಮಿರಜಕರ, ಇನಾಮತಿ ಗೌಡ್ರ, ಸುರೇಶ ಕಂಬಿ, ಶಿಲ್ಪಾ ತೊಡಕರ, ಅನುರಾಧ ಕಬ್ಬೂರ, ರೇಣುಕಾ ಪೂಜಾರಿ, ಸುಜಾತಾ ಮಠಪತಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net