ನಗರದ ವಿವಿಧೆಡೆ ಶ್ರೀರಾಮ ನವಮಿ

balarama devaru
Published on

ಮೈಸೂರು: ಮರ್ಯಾದಾ ಪುರುಷೋತ್ತಮ, ರಘುವಂಶ ಕುಲತಿಲಕ ಶ್ರೀರಾಮನ ಜನ್ಮ ದಿನವಾದ ಶ್ರೀರಾಮನವಮಿಯನ್ನು ಬುಧವಾರ ನಗರದಲ್ಲಿ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.

ನಗರಾದ್ಯಂತ ವಿವಿಧ ಸಂಘ-ಸಂಸ್ಥೆಗಳಲ್ಲಿ ಹಾಗೂ ದೇವಸ್ಥಾನಗಳಲ್ಲಿ ಮಜ್ಜಿಗೆ, ಪಾನಕ ಹಾಗೂ ಕೋಸಂಬರಿಯನ್ನು ಸಾರ್ವಜನಿಕರಿಗೆ ವಿತರಿಸಲಾಯಿತು. ವಿಶೇಷ ಪೂಜೆಗಳು ಭಕ್ತರ ಸಮ್ಮುಖ ಸಂಪನ್ನಗೊಂಡವು.

ಹಲವು ಆಟೋರಿಕ್ಷಾ ನಿಲ್ದಾಣಗಳಲ್ಲಿ ಶ್ರೀರಾಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪ್ರಸಾದ ವಿತರಿಸಲಾಯಿತು. ದೇವರಾಜ ಅರಸು ರಸ್ತೆ, ಕೆ.ಆರ್.ವೃತ್ತ, ಚಾಮರಾಜ ಜೋಡಿ ರಸ್ತೆ, ನಂಜು ಮಳಿಗೆ, ಅಗ್ರಹಾರ, ಚಾಮುಂಡಿಪುರಂ, ಕೆ.ಜಿ.ಕೊಪ್ಪಲು, ಶಾರದಾದೇವಿನಗರ, ರಾಮಕೃಷ್ಣನಗರ, ಕುಂಬಾರಕೊಪ್ಪಲು, ವಿನಾಯಕನಗರ ಸೇರಿದಂತೆ ವಿವಿಧ ಕಡೆ ವ್ಯಾಪಾರಸ್ಥರು ಹಾಗೂ ವಿವಿಧ ಸಂಘಟನೆ ಮುಖಂಡರು ಮತ್ತು ಕಾರ್ಯಕರ್ತರು ಮಜ್ಜಿಗೆ, ಪಾನಕ ವಿತರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net