ಶ್ರೀರಾಮ ನವಮಿ ಆಚರಣೆ

6 vikram 9
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಪ್ರಭು ಶ್ರೀರಾಮನ ಆದರ್ಶಗಳನ್ನು ನಾವು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಶ್ರೀರಾಮನ ತತ್ವಗಳನ್ನು ಪಾಲಿಸಿದಂತೆ ಆಗುತ್ತದೆ ಎಂದು ಮಾಜಿ ಮೇಯರ್​ ಈರೇಶ ಅಂಚಟಗೇರಿ ಹೇಳಿದರು.

ಶ್ರೀರಾಮ ನವಮಿ ಅಂಗವಾಗಿ ನಗರದ ಮಹಾತ್ಮ ಬಸವೇಶ್ವರ ನಗರದಲ್ಲಿ ಭಾನುವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಶ್ರೀರಾಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.

ಬಸವರಾಜ ಕಡಕೊಳ, ಹಂಜಿ ಶ್ರೀಕಾಂತ ಕ್ಯಾತಪ್ಪನವರ, ಶೇಕರ ಕವಳಿ, ರಾಜೇಶ್ವರಿ ಅಳಗವಾಡಿ, ಶಂಕರ ಪುರಲಿ, ಜಯಶ್ರೀ ಪಾಟೀಲ, ಪ್ರೇಮಾ ಶೆಟ್ಟಿ, ಬಡಾವಣೆ ನಿವಾಸಿಗಳು, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net