ಸಿಂಧನೂರಿನ ಶ್ರೀರಾಮ ಮಂದಿರದಲ್ಲಿ ಕಾರ್ಯಕ್ರಮ

22SND-04
filter: 0; fileterIntensity: 0.0; filterMask: 0; module: j; hw-remosaic: 0; touch: (-1.0, -1.0); modeInfo: ; sceneMode: Auto; cct_value: 0; AI_Scene: (200, -1); aec_lux: 131.07281; hist255: 0.0; hist252~255: 0.0; hist0~15: 0.0;
Published on

ಸಿಂಧನೂರು: ಶ್ರೀ ಗುರು ರಾಘವೇಂದ್ರ ಸ್ವಾಮಿಗಳ 353ನೇ ಆರಾಧನಾ ಮಹೋತ್ಸವದ ಅಂಗವಾಗಿ ಶುಕ್ರವಾರ ಬ್ರಾಹ್ಮಣರ ಓಣಿಯಲ್ಲಿರುವ ಶ್ರೀರಾಮ ಮಂದಿರದಲ್ಲಿ ರಥೋತ್ಸವ ವಿಜೃಂಭಣೆಯಿಂದ ನಡೆಯಿತು.

ಬೆಳಗ್ಗೆ ನೈರ್ಮಲ್ಯ ವಿಸರ್ಜನೆ, ಅಭಿಷೇಕ, ಅಷ್ಟೋತ್ತರ ಪಾರಾಯಣ, ಅಲಂಕಾರ ನಡೆಯಿತು. ಅಲಂಕಾರ ಮತ್ತು ಪೂಜೆಯನ್ನು ದೇವಸ್ಥಾನದ ಅರ್ಚಕ ಕೃಷ್ಣಶಾಸ್ತ್ರಿ ನೇರವೇರಿಸಿದರು. ವಿವಿಧ ಮಂಡಳಿಗಳ ಭಜನೆ ಮೂಲಕ ಬ್ರಾಹ್ಮಣರ ಬೀದಿಯಲ್ಲಿ ರಥೋತ್ಸವ ಸಾಗಿತು. ಪ್ರಮುಖರಾದ ರಾಮಕೃಷ್ಣಾಚಾರ್ ಗೋನ್ವಾರ, ಭೀಮಸೇನ ಮಠಾಧಿಕಾರ ಪುರೋಹಿತ, ಎಂ.ಕೆ.ಗೋರ್ಕರ್, ವೆಂಕಣ್ಣ ದೋಟಿಹಾಳ, ಹನುಮೇಶಾಚಾರ್ ಮಸ್ಕಿ, ಮನೋಹರರಾವ್ ಕುಲಕರ್ಣಿ, ರಾಜು ಬಂಡಿ ವಕೀಲ್, ಪ್ರಹ್ಲಾದ ಕುಲಕರ್ಣಿ, ಪ್ರಭು ದೇಶಪಾಂಡೆ, ದಿನೇಶ ಹೆಬ್ಬಾಳ, ಆನಂದ ಗೋರ್ಕರ್, ಅವಿನಾಶ್ ಬಂಡಿವಕೀಲ್, ಜಗನ್ನಾಥ ದೇಶಪಾಂಡೆ, ಭೀಮಸೇನ ಜಾಗೀರದಾರ್, ವಿನಾಯಕ ಕಲ್ಲೂರು, ಗೋವಿಂದ ಮಠಾಧಿಕಾರ, ರಂಗನಾಥಚಾರ್ ಮಾಧವಚಾರ್ ಸಾಲಗುಂದಾ, ಗುಂಡುರಾವ್ ಚನ್ನಳ್ಳಿ, ಪ್ರಾಣೇಶ ಸಿದ್ರಾಂಪುರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net