

ಚಿಕ್ಕಮಗಳೂರು: ಶ್ರೀರಾಮ ಲೋಕಾ ಧರ್ಮದರ್ಶಕ. ರಾಮನಾಮದ ಅನುಸಂಧಾನದಲ್ಲಿ ಒಳಿತಿದೆ ಎಂದು ಆಧ್ಯಾತ್ಮಿಕ ಚಿಂತಕ ಪ್ರವಚನಕಾರ ಶಿವಮೊಗ್ಗದ ಜಿ.ಎಸ್.ನಟೇಶ್ ಅಭಿಪ್ರಾಯ ವ್ಯಕ್ತಪಡಿಸಿದರು.
ಶ್ರೀಸತ್ಯಸಾಯಿ ಸೇವಾ ಸಮಿತಿ ನಗರದ ಸಾಯಿ ಮಧುವನ ಬಡಾವಣೆಯ ಶ್ರೀಸತ್ಯಸಾಯಿ ಸೇವಾ ಕ್ಷೇತ್ರದಲ್ಲಿ ಆಯೋಜಿಸಿದ್ದ ಶ್ರೀ ರಾಮಾಯಣ ಪಾತ್ರಗಳ ವಿಶ್ಲೇಷಣೆ ಕುರಿತ ಅಧ್ಯಯನಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಮಾಯಣ, ಮಹಾಭಾರತ, ಭಗವದ್ಗೀತೆ ಆಧ್ಯಾತ್ಮಿಕ ಸಮೃದ್ಧಿಗೆ ಅಪಾರ ಕೊಡುಗೆ ನೀಡಿದೆ. ಇಲ್ಲಿ ಕೊಡುವ ಶಿಕ್ಷಣ ಜಗತ್ತಿನ ಯಾವುದೇ ವಿಶ್ವವಿದ್ಯಾನಿಲಯವೂ ನೀಡಲಾಗದು. ಜೀವನದ ಅಗತ್ಯತೆಯ ಜೊತೆಗೆ ಮೌಲ್ಯಗಳನ್ನು ಕಟ್ಟಿಕೊಡುತ್ತವೆ ಎಂದರು.
ಶ್ರೀರಾಮ ತ್ಯಾಗಕ್ಕೆ ಪ್ರಸಿದ್ಧನಾದರೆ, ಶ್ರೀಕೃಷ್ಣ ರಾಧಾ ಪ್ರಿಯ. ರಾಮ ನಡೆದಂತೆ ನಡೆ, ಕೃಷ್ಣ ಹೇಳಿದ್ದನ್ನು ಕೇಳು ಎನ್ನುವುದು ಲೋಕೋಕ್ತಿ. ಸಂಕಟ ಕಾಲದ ನೀತಿಯನ್ನು ಮಹಾಭಾರತದಲ್ಲಿ ನೋಡಬಹುದು. ಯುಕ್ತಿಗೆ ಕೃಷ್ಣನೇ ಸಾಟಿ. ತಾಳ್ಮೆ, ನಿಸ್ವಾರ್ಥ, ಸಂಯಮ, ಶಾಂತಿ ಇದ್ದರೆ ಹೃದಯ ಕ್ಷೀರ ಸಾಗರವಾಗುತ್ತದೆ. ಇಲ್ಲಿ ಭಗವಂತನ ಸಾನಿಧ್ಯವಿರುತ್ತದೆ ಎಂದು ಹೇಳಿದರು.
ರಾಮಾಯಣ ಶ್ರೇಷ್ಠ ಕಾವ್ಯ. ವಾಲ್ಮೀಕಿ ಹೆಣೆದಿರುವ ಕಥಾಹಂದರದಲ್ಲಿ ಬರುವ ಎಲ್ಲ ಪಾತ್ರಗಳು ನಾವು ಹೇಗೆ ಬದುಕಬೇಕೆಂಬುದನ್ನು ಕಲಿಸುತ್ತದೆ. ಶ್ರೀರಾಮ ಆದರ್ಶಪುರುಷೋತ್ತಮ. ಸೀತಾಮಾತೆ ಪಾವಿತ್ರö್ಯಕ್ಕೆ ಪರ್ಯಾಯ. ಭರತ ದೊರೆತನದ ಭಾರ ಹೊತ್ತರೂ ದೊರೆಯಾಗಲಿಲ್ಲ. ರಾಮ ಪಾದುಕೆಯನ್ನು ಸಿಂಹಾಸನದ ಮೇಲಿಟ್ಟು ರಾಜ್ಯಭಾರ ಮಾಡಿದ. ಮಾರುತಿ ಎಂದರೆ ಶಕ್ತಿ ಮತ್ತು ಪ್ರೀತಿಯ ಸಂಗಮ. ಶಬರಿ ಅದ್ವೆÊತದ ಸಾಕಾರ ರೂಪವಾಗಿ ನಿಲ್ಲುತ್ತಾಳೆ. ಅಹಲ್ಯಾ ಪಾತ್ರವೂ ವೈಶಿಷ್ಟö್ಯಪೂರ್ಣ ಎಂದು ಪಾತ್ರಗಳನ್ನು ವಿಶ್ಲೇಷಿಸಿದರು.
ಡಿವಿಜಿ ಅವರಿಗೆ ಭರತನ ಪಾತ್ರ ಹೆಚ್ಚು ಅಚ್ಚುಮೆಚ್ಚು. ಮಹಾನ್‌ಗ್ರಂಥದ ತತ್ವ ಸಾರವನ್ನು ಸರಳವಾಗಿ ನಾಲ್ಕುಸಾಲಿನ ೯೪೫ಕಂದಪದ್ಯಗಳಲ್ಲಿ ತೆರೆದಿಟ್ಟಿದ್ದಾರೆ. ಪ್ರತ್ಯುಪಕಾರ ಬಯಸಿ ಉಪಕಾರ ಮಾಡಿದರೆ ಆಪತ್ತಿಗೆ ಆಹ್ವಾನ ನೀಡಿದಂತೆ. ಭಗತವಂತ ಭಕ್ತಿಗೆ ಒಲಿಯುತ್ತಾನೆ ಹೊರÀತು ಆಡಂಬರಕಲ್ಲ. ಸ್ನಾನಕ್ಕಿಂತ ನಿರ್ಮಲ ಮನಸ್ಸು ಮುಖ್ಯ. ಹಸಿದವನಿಗೆ ಅನ್ನ ಕೊಡಬೇಕೆ ಹೊರತು ಆನೆಯನ್ನಲ್ಲ ಎಂದರು.
ಪರಿಶ್ರಮ ಇಲ್ಲದ ದುಡಿಮೆ, ಎಚ್ಚರಿಕೆ ಇಲ್ಲದ ಸುಖ, ಚಾರಿತ್ರö್ಯ ಇಲ್ಲದ ಶಿಕ್ಷಣ ಮಾನವೀಯತೆ ಇಲ್ಲದ ವಿಜ್ಞಾನ, ನೈತಿಕತೆ ಇಲ್ಲದ ರಾಜಕಾರಣ. ನೀತಿ ಇಲ್ಲದ ವ್ಯಾಪಾರ, ತ್ಯಾಗವಿಲ್ಲದ ಪೂಜೆ ವ್ಯರ್ಥ. ಈ ಸಪ್ತಪಾತಕಗಳಿಂದ ಹೊರಬರಲು ಸತ್ಸಂಗಗಳು ಸಹಕಾರಿ ಎಂದು ಹೇಳಿದರು.
ಹಣಕ್ಕಿಂತ ಗುಣಕ್ಕೆ ಪ್ರಾಧ್ಯಾನತೆ ಕೊಡಬೇಕೆಂಬುದು ಆದರ್ಶ. ಹಣವನ್ನು ಹಿಂಬಾಲಿಸಿ ಹೋದವರು ಬಹಳಷ್ಟು ಜನ. ಸರಸ್ವತಿ ಸರಿದಾರಿ ತೋರಿದರೆ, ಲಕ್ಷ್ಮಿ ದಾರಿ ತಪ್ಪಿಸುವುದೇ ಹೆಚ್ಚು ಎಂದ ಅವರು, ಭಜನೆ ಮತ್ತು ಭೋಜನ ಸುಖಜೀವನಕ್ಕೆ ಅಗತ್ಯ. ನಾಲ್ಕುಜನರಿಗೆ ಸಂತೋಷಕೊಟ್ಟು ಆ ಸಂತೋಷದಲ್ಲಿ ನಾವು ಪಾಲು ಪಡೆಯುವುದೇ ನಿಜವಾದ ಸಂತೋಷ. ರಾಮಾಯಣ ಪಾತ್ರಗಳ ನಿಜಸಂದೇಶ ಭಕ್ತಿ. ವರ ಎಂದು ಕೇಳಿದ್ದು ಶಾಪವೂ ಆಗುವ ಸಾಧ್ಯತೆ ಇಲ್ಲಿ ಗಮನಿಸಬಹುದು ಎಂದರು.
ರಾಮ ಕಾಡಿಗೆ ಹೋಗಲು ಮೂಲ ಕಾರಣ ಆದ ಮಂಥರೆ, ರಾವಣವಧೆಗೂ ಕಾರಣಕರ್ತಳು ಎಂದು ಮರೆಯಬಾರದು. ಹೆಣ್ಣಿನ ವ್ಯಾಮೋಹಕ್ಕೆ ಸಿಲುಕಿ ದಶರಥಮಹಾರಾಜ ರಾಮನನ್ನು ಕಾಡಿಗಟ್ಟಬೇಕಾಯಿತು. ಎಲ್ಲವೂ ವಿಧಿಯಾಟ ಎಂದು ರಾಮನೆ ಹೇಳಿದ್ದಾನೆ. ತನ್ನ ಕುಟುಂಬಕ್ಕಿAತ ಪ್ರಜೆಗಳ ಹಿತರಕ್ಷಣೆ ಮುಖ್ಯವೆಂದು ಪರಿಭಾವಿಸಿದ್ದ ರಾಮ, ಸೀತೆಯನ್ನು ಕಾಡಿಗಟ್ಟಿದ ಎಂದು ವಿಶ್ಲೇಷಿಸಿದರು.
ಶ್ರೀಸತ್ಯಸಾಯಿ ಸಂಸ್ಥೆಗಳ ಜಿಲ್ಲಾಧ್ಯಕ್ಷ ಬಿ.ಪಿ.ಶಿವಮೂರ್ತಿ, ಸ್ಥಳೀಯ ಸಮಿತಿ ಅಧ್ಯಕ್ಷ ಟಿ.ಪಿ.ಭೋಜೇಗೌಡ, ಅಧ್ಯಯನ ಗೋಷ್ಠಿಯ ಪ್ರಾಯೋಜಕರಾದ ಬಿ.ಎಂ.ಕುಮಾರ್, ರಾಧಿಕಾರಾಣಿ, ಶ್ರೀಸತ್ಯಸಾಯಿ ಸೇವಾಸಮಿತಿ ಅಧ್ಯಕ್ಷ ಎಂ.ಆರ್.ನಾಗರಾಜ ಮತ್ತಿತರರಿದ್ದರು.