ಶ್ರೀರಾಮ ಪ್ರಥಮ ದರ್ಜೆ ಕಾಲೇಜಿಗೆ ಸಮಗ್ರ ಶಾರದಾ ಪ್ರಶಸ್ತಿ

New Project (20)
Published on

ಉಳ್ಳಾಲ: ತಲಪಾಡಿ ಶಾರದಾ ಕಾಲೇಜಿನಲ್ಲಿ ಬುಧವಾರ ನಡೆದ ರಾಷ್ಟ್ರಮಟ್ಟದ ಸಮಗ್ರ ಶಾರದಾ ಫೆಸ್ಟ್ ಸ್ಪರ್ಧೆಯಲ್ಲಿ ಶ್ರೀರಾಮ ಪ್ರಥಮ ದರ್ಜೆ ಕಾಲೇಜು ಸಮಗ್ರ ಶಾರದಾ ರನ್ನರ್ ಪ್ರಶಸ್ತಿ ಪಡೆದಿದೆ.

ವಿವಿಧ ಕಾಲೇಜುಗಳಿಂದ ಒಟ್ಟು 392 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸಾಂಸ್ಕೃತಿಕ ಸ್ಪರ್ಧೆ, ನಿರ್ವಹಣಾ ಮಟ್ಟದ ಸ್ಪರ್ಧೆ, ಪಾರ್ಲಿಮೆಂಟ್ ಮುಂತಾದ ಸ್ಪರ್ಧೆಗಳು ನಡೆದವು. ಶ್ರೀರಾಮ ಪ್ರಥಮ ದರ್ಜೆ ಕಾಲೇಜು ಸಮಗ್ರ ಶಾರದಾ ರನ್ನರ್ ಪ್ರಶಸ್ತಿ ಪಡೆಯಿತು. ಮಂಗಳೂರಿನ ಯೇನೆಪೊಯ ಕಾಲೇಜು ವಿನ್ನರ್ ಪ್ರಶಸ್ತಿ ಪಡೆಯಿತು.

ಪವರ್ ಹೌಸ್‌ನ ಶರಣ್ ಚಿಲಿಂಬಿ ಉದ್ಘಾಟಿಸಿದರು. ಶಾರದಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ.ಎಂ.ಬಿ. ಪುರಾಣಿಕ್ ಅಧ್ಯಕ್ಷತೆ ವಹಿಸಿದ್ದರು. ಕಾಲೇಜು ಪ್ರಾಂಶುಪಾಲೆ ಡಾ. ಮೀನಾ ಜೆ. ಫನಿಕ್ಕರ್, ನಿರ್ದೇಶಕ ಸಮೀರ್ ಪುರಾಣಿಕ್, ಫೆಸ್ಟ್ ಸಂಯೋಜಕರಾದ ವಿದ್ಯಾಶ್ರೀ ಬಿ. ಹಾಗೂ ಐಶ್ವರ್ಯಾ ಬಿ. ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net