ಕ್ಯಾದಿಗ್ಗೆರೆ ಗ್ರಾಮಸ್ಥರಿಂದ ಶ್ರೀರಾಮ ಭಜನೆ

satyanarayana
ಕ್ಯಾದಿಗ್ಗೆರೆ ಬನಶಂಕರಿ ದೇವಾಲಯದಲ್ಲಿ ಸತ್ಯನಾರಾಯಣ ಪೂಜೆ ನೆರವೇರಿತು.
Published on

ಶಿವಮೊಗ್ಗ: ಶತಮಾನಗಳಿಗೂ ಹೆಚ್ಚು ಕಾಲದಿಂದ ಪ್ರತಿನಿತ್ಯ ಗ್ರಾಮದಲ್ಲಿ ರಾಮಭಜನೆ ಮಾಡುವ ಮೂಲಕ ಗಮನ ಸೆಳೆದಿರುವ ತೀರ್ಥಹಳ್ಳಿ ತಾಲೂಕು ಕ್ಯಾದಿಗ್ಗೆರೆಯಲ್ಲೂ ಸೋಮವಾರ ಸಂಭ್ರಮ ಮನೆಮಾಡಿತ್ತು. ಗ್ರಾಮದ 300ಕ್ಕೂ ಹೆಚ್ಚು ಮಂದಿ ಬೆಳಗ್ಗೆ 11.15ರಿಂದ ರಾಮಲಲ್ಲಾ ಪ್ರತಿಷ್ಠಾಪನೆ ಮುಕ್ತಾಯದವರೆಗೂ ರಾಮ ಭಜನೆ ಮಾಡಿದರು.

ಬನಶಂಕರಿ ದೇವಾಲಯದಲ್ಲಿ ಸತ್ಯನಾರಾಯಣ ವ್ರತ ಏರ್ಪಡಿಸಲಾಗಿತ್ತು. ವಿವಿಧ ಭಜನಾ ತಂಡಗಳ ಸದಸ್ಯರು, ಗ್ರಾಮದ ಹಿರಿಯರು ಭಜನೆಯಲ್ಲಿ ಪಾಲ್ಗೊಂಡಿದ್ದರು. ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರತಿಷ್ಠಾಪನೆ ಹಾಗೂ ಪ್ರಧಾನಿ ನರೇಂದ್ರ ಮೋದಿ ಭಾಷಣದ ನೇರ ಪ್ರಸಾರ ವೀಕ್ಷಣೆಗೂ ಅವಕಾಶ ಮಾಡಲಾಗಿತ್ತು.
ಭಾರತಮಾತೆಯ ಭಾವಚಿತ್ರ ಹಾಗೂ ಶ್ರೀರಾಮನ ಫ್ಲೆಕ್ಸ್‌ಗೆ ಪುಷ್ಪಾರ್ಷನೆ ಮಾಡಲಾಯಿತು. ಸಭಾ ಕಾರ್ಯಕ್ರಮದಲ್ಲಿ ಆರ್‌ಎಸ್‌ಎಸ್ ವಿಭಾಗ ಕಾರ್ಯವಾಹ ಲೋಹಿತಾಶ್ವ ಬೌದ್ಧಿಕ್ ನೀಡಿದರು. ಶ್ರೀರಾಮನ ತತ್ವಾದರ್ಶಗಳ ಪ್ರಸ್ತುತತೆ, ಹಿಂದು ಸಮಾಜಕ್ಕೆ ಅಗತ್ಯವಿರುವ ಏಕತಾಭಾವ, ಅಯೋಧ್ಯೆ ರಾಮಜನ್ಮಭೂಮಿ ಪಡೆದುಕೊಳ್ಳಲು ನಡೆದ ಕಾನೂನು ಹಾಗೂ ಸಂಘಟನಾತ್ಮಕ ಹೋರಾಟಗಳ ಬಗ್ಗೆ ವಿವರಿಸಿದರು. ಗ್ರಾಮದ ಹಿರಿಯರಾದ ತಿಮ್ಮಪ್ಪ ಗೌಡ ಅಧ್ಯಕ್ಷತೆ ವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net