ಶ್ರೀರಾಮ ದೇವಳ ಪ್ರತಿಷ್ಠಾಪನಾ ವರ್ಧಂತಿ

kota-3
Published on

ಕೋಟ: ಕೋಡಿ ಕನ್ಯಾಣದ ಶ್ರೀರಾಮ ದೇಗುಲದ 15ನೇ ವಾರ್ಷಿಕ ಪ್ರತಿಷ್ಠಾಪನಾ ವರ್ಧಂತಿ ಉತ್ಸವ, 31ನೇ ವರ್ಷದ ಸಾಮೂಹಿಕ ಸತ್ಯನಾರಾಯಣ ಪೂಜೆ ಶುಕ್ರವಾರ ಜರಗಿತು.

ಬೆಳಗ್ಗೆ ಕಲಶ ಸ್ಥಾಪನೆ, ಅಧಿವಾಸ ಹೋಮ, ಸಾಮೂಹಿಕ ಸತ್ಯನಾರಾಯಣ ಪೂಜೆ, ಮಹಾಅನ್ನಸಂತರ್ಪಣೆ, ರಾತ್ರಿ ರಂಗಪೂಜೆ ನಡೆಯಿತು.

ಪಾಂಡೇಶ್ವರ ಸುಬ್ರಹ್ಮಣ್ಯ ಭಟ್ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ನೆರವೇರಿದವು. ದೇಗುಲ ಅಧ್ಯಕ್ಷ ರಾಘವೇಂದ್ರ ಕರ್ಕೇರ, ಉಪಾಧ್ಯಕ್ಷರಾದ ರಾಜು ಕರ್ಕೇರ, ಸತೀಶ್ ಜಿ.ಕುಂದರ್, ಪ್ರಧಾನ ಕಾರ್ಯದರ್ಶಿ ಅಶೋಕ್ ಸಾಲಿಯಾನ್, ಜತೆ ಕಾರ್ಯದರ್ಶಿ ವಿಜಯ ಮಾಸ್ತರ್, ಮಹೇಶ್ ತಿಂಗಳಾಯ, ಕೋಶಾಧಿಕಾರಿ ಜಯಕುಮಾರ್ ಎ.ಎಸ್, ಅರ್ಚಕ ಭಾಸ್ಕರ್ ಬಾಯರಿ, ಸಹಾಯಕ ಅರ್ಚಕ ರಾಮದಾಸ ಸಾಲಿಯಾನ್ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net