ಹೊಸಹಳ್ಳಿ-ರಾಮನಹಳ್ಳಿ ವೃತ್ತದಲ್ಲಿ ರಾಮನವಮಿ: ಮಳೆಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ಗೆಳೆಯರ ಬಳಗ

Sri Ram Navami celebration Mandya
Published on

ಮಂಡ್ಯ: ನಗರದ ಹೊಸಹಳ್ಳಿ-ರಾಮನಹಳ್ಳಿ ವೃತದಲ್ಲಿ ಸರ್.ಎಂ.ವಿಶ್ವೇಶ್ವರಯ್ಯ ಗೆಳೆಯರ ಬಳಗ ಮತ್ತು ಹೊಸಹಳ್ಳಿ-ರಾಮನಹಳ್ಳಿ ಯುವಕರು ಶ್ರೀರಾಮನವಮಿಯನ್ನು ಅದ್ದೂರಿಯಾಗಿ ಆಚರಣೆ ಮಾಡಿದರು. ಅಂತೆಯೇ ರಾಜ್ಯದಲ್ಲಿ ಉತ್ತಮ ಮಳೆ, ಬೆಳೆ ವೃದ್ದಿಗಾಗಿ ವಿಶೇಷ ಪೂಜೆ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಸಾರ್ವಜನಿಕರಿಗೆ ಮಜ್ಜಿಗೆ, ಪಾನಕ ಮತ್ತು ಕೊಸಂಬರಿ ವಿತರಣೆ ಮಾಡಲಾಯಿತು.

ಈ ವೇಳೆ ಮಾತನಾಡಿದ ಬಳಗದ ಮುಖ್ಯಸ್ಥ ಹೊಸಹಳ್ಳಿ ಶಿವು, ರಾಜ್ಯದಲ್ಲಿ ಬರಗಾಲ ನಿವಾರಣೆಯಾಗಲು ಉತ್ತಮ ಮಳೆಯಾಗಿ ಸಮೃದ್ಧಿ ಬೆಳೆ ಬರಲೆಂದು ಪ್ರಾರ್ಥನೆ ಸಲ್ಲಿಸಿದ್ದೇವೆ. ಬರಗಾಲ ತೊಲಗಿ ಜಿಲ್ಲೆಯು ಹಸಿರಿನಿಂದ ಕಂಗೊಳಿಸಲಿ ಶ್ರೀರಾಮ ಕೃಪೆ ತೊರಲಿ. ಬಿಸಿಲು ತಾಳಲಾದರೆ ಜನ-ಜಾನುವಾರು ಬಳಲುವಂತಾಗಿದೆ. ಕೆರೆ-ಕಟ್ಟೆಗಳಲ್ಲಿ ಕುಡಿಯಲು ನೀರು ಇಲ್ಲ. ದಾಹ ನೀಗಿಸಲು ಮಜ್ಜಿಗೆ ಮತ್ತು ಪಾನಕ ಮಾಡಿ ಜನರಿಗೆ ವಿತರಿಸಿದ್ದೇವೆ ಎಂದರು.

ಮುಖಂಡರಾದ ಜಯಣ್ಣ, ಮಾದರಾಜೇ ಅರಸು, ಅನಿಲ್, ಮಂಜುನಾಥ್, ಮಧು, ಶಂಕರ್, ಶಿವಕುಮಾರ್ ಕೆಂಪಯ್ಯ, ವಿವೇಕ್, ಪ್ರಸನ್ನ, ಬೋರಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net