31ರಿಂದ ರಾಯರ ಆರಾಧನಾ ಮಹೋತ್ಸವ

RAYARU
ಶ್ರೀರಾಘವೇಂದ್ರ ರಾಯರ ಮೂರ್ತಿ
Published on

ಸಿಂಧನೂರು: ಇಲ್ಲಿನ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ 352ನೇ ಆರಾಧನಾ ಮಹೋತ್ಸವ ಆ.31 ರಿಂದ ಸೆ.2ರ ವರೆಗೆ ಅದ್ದೂರಿಯಾಗಿ ಜರುಗಲಿದೆ ಎಂದು ಮಠದ ವಿಚಾರಣಾಕರ್ತ ರಾಘವೇಂದ್ರರಾವ್ ಕುಲಕರ್ಣಿ ಹಾಗೂ ಅರ್ಚಕ ನವೀನಾಚಾರ್ ತಿಳಿಸಿದ್ದಾರೆ.

ಮೂರು ದಿನಗಳ ಕಾಲ ಗುರುರಾಯರ ಉತ್ಸವ, ಪಾದಪೂಜೆ, ಪಂಚಾಮೃತ ಅಭಿಷೇಕ, ವಿಶೇಷ ಪೂಜೆ, ಅಲಂಕಾರ ಸೇವೆ ನಡೆಸಲಾಗುವುದು. ಹಸ್ತೋದಕ ರಾಯರ ಅಷ್ಟೋತ್ತರ, ವಿವಿಧ ಭಜನಾ ಮಂಡಳಿಗಳ ಭಜನಾ ಕಾರ್ಯಕ್ರಮ ಜರುಗಲಿದೆ.

ಆರಾಧನೆ ನಿಮಿತ್ತ ಧಾರವಾಡದ ಪಂಡಿತ್ ನಾರಾಯಣಾಚಾರ್ ಧೂಳಖೇಡ್‌ರಿಂದ, ರಾಘವೇಂದ್ರಸ್ವಾಮಿಗಳ ಮಹಿಮೆ ಕುರಿತು ಆ.27 ರಿಂದ 30ರ ವರೆಗೆ ಸಂಜೆ 5 ರಿಂದ 6 ಗಂಟೆ ವರೆಗೆ ವಿಶೇಷ ಉಪನ್ಯಾಸ ನಡೆಯಲಿದೆ. ಉತ್ತರಾರಾಧನೆಯಂದು ಮಹಾರಥೋತ್ಸವ ಜರುಗಲಿದೆ. ಸದ್ಭಕ್ತರು ಉಪನ್ಯಾಸ ಹಾಗೂ ಮೂರು ದಿನಗಳ ಆರಾಧನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು ಎಂದು ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net