ಶ್ರೀಪ್ರಸನ್ನ ನಂಜುಂಡೇಶ್ವರಸ್ವಾಮಿ ರಥೋತ್ಸವ

9
Published on

ಮೈಸೂರು: ನಗರದ ಹಳೇ ಸಂತೆಪೇಟೆಯಲ್ಲಿರುವ ಪುರಾತನವಾದ ಶ್ರೀಪ್ರಸನ್ನ ನಂಜುಂಡೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಹೋಳಿ ಹುಣ್ಣಿಮೆ ಅಂಗವಾಗಿ ಶುಕ್ರವಾರ ರಥೋತ್ಸವ ಜರುಗಿತು.

ರಥೋತ್ಸವಕ್ಕೆ ಶಾಸಕ ಕೆ.ಹರೀಶ್‌ಗೌಡ ಅವರು ದಂಪತಿ ಸಹಿತ ಚಾಲನೆ ನೀಡಿದ ಬಳಿಕ ಹಳೆಯ ಸಂತೆಪೇಟೆಯ ರಸ್ತೆ ಮಾರ್ಗದಿಂದ ರಮಾವಿಲಾಸ ರಸ್ತೆ, ಕೃಷ್ಣ ವಿಲಾಸ ರಸ್ತೆಯ ಮಾರ್ಗವಾಗಿ ರಥೋತ್ಸವ ಸಾಗಿತು. ನಂತರ ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು.

ಬಿಜೆಪಿ ನಗರಾಧ್ಯಕ್ಷ ಎಲ್.ನಾಗೇಂದ್ರ, ಮುಡಾ ಮಾಜಿ ಅಧ್ಯಕ್ಷ ಧೃವಕುಮಾರ್, ನಗರ ಪಾಲಿಕೆ ಮಾಜಿ ಸದಸ್ಯ ಪ್ರಶಾಂತ್‌ಗೌಡ, ಮುಖಂಡರಾದ ಕಿಶನ್ ಹರೀಶ್‌ಗೌಡ, ದೇವಸ್ಥಾನ ಸಮಿತಿ ಅಧ್ಯಕ್ಷ ರಾಜು, ಉಪಾಧ್ಯಕ್ಷ ಮುನವರ್ ಪಾಷಾ, ಕಾರ್ಯದರ್ಶಿ ಆಸಿಫ್ ಅಹಮದ್, ಸಹ ಕಾರ್ಯದರ್ಶಿ ಸೋಮಶೇಖರ್, ಮುಖಂಡರಾದ ನಂಜುಂಡಿ, ನವೀನ್, ರವಿಚಂದ್ರ, ವಿಘ್ನೇಶ್ವರ ಭಟ್, ಸುದರ್ಶನ್, ಪ್ರವೀಣ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net