

ಕೆ.ಆರ್.ನಗರ: ತಾಲೂಕಿನ ಹೊಸಕೊಪ್ಪಲು ಗೇಟ್ ಬಳಿ ಇರುವ ಶ್ರೀ ಆದಿಶಕ್ತಿ ಪಟ್ಲದಮ್ಮ ಮತ್ತು ಶ್ರೀ ಲಕ್ಷ್ಮೀದೇವಿ ದೇವಸ್ಥಾನದ ಪೂಜಾ ಮಹೋತ್ಸವ ಶುಕ್ರವಾರ ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.
ಜಾತ್ರಾ ಮಹೋತ್ಸವದ ಅಂಗವಾಗಿ ಬೆಳಗ್ಗೆ 6.30ರಿಂದ ದೇವಸ್ಥಾನದಲ್ಲಿ ಗಣಪತಿ ಹೋಮ, ನವಗ್ರಹ ಹೋಮ, ದುರ್ಗ ಹೋಮವನ್ನು ಕೆ.ಆರ್.ನಗರದ ಚಂದ್ರ ಮೌಳೇಶ್ವರ ದೇವಸ್ಥಾನದ ಅರ್ಚಕ ಗಣಪತಿ ಭಟ್ ನೇತೃತ್ವದಲ್ಲಿ ನಡೆಸಲಾಯಿತು.
ಆ ನಂತರ ಪಟ್ಲದಮ್ಮ ಮತ್ತು ಲಕ್ಷ್ಮೀ ದೇವರಿಗೆ ಪ್ರಧಾನ ಅರ್ಚಕ ರಾಜಣ್ಣ ವಿಶೇಷ ಪೂಜೆ, ಮಹಾಮಂಗಳಾರತಿ ನೇರವೇರಿಸಿದರು.
ಜಾತ್ರಾ ಮಹೋತ್ಸವಕ್ಕೆ ಹೊಸಕೊಪ್ಪಲು, ಡಿ.ಕೆ.ಕೊಪ್ಪಲು, ಕಂಚಗಾರಕೊಪ್ಪಲು, ಸಿದ್ದಾಪುರ, ಶ್ರೀರಾಮಪುರ, ಕೆಸ್ತೂರು ಗೇಟ್, ಅರಸನಕೊಪ್ಪಲು ಸೇರಿದಂತೆ ಮತ್ತಿತರ ಗ್ರಾಮಗಳ ಸಾವಿರಾರು ಮಂದಿ ಭಾಗವಹಿಸಿದ್ದರು, ಭಕ್ತಾದಿಗಳಿಗೆ ಪ್ರಸಾದ ಆಯೋಜಿಸಲಾಗಿತ್ತು.
ನವನಗರ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ಬಸಂತ್, ನಿರ್ದೇಶಕ ಚಂದ್ರಕುಮಾರ್, ಪುರಸಭೆ ಅಧ್ಯಕ್ಷ ಶಿವುನಾಯಕ್, ಸದಸ್ಯ ನಟರಾಜು, ಪಿಎಲ್‌ಡಿ ಬ್ಯಾಂಕ್ ಉಪಾಧ್ಯಕ್ಷ ಪ್ರದೀಪ್, ನಿರ್ದೇಶಕರಾದ ಕೆ.ಟಿ.ಚಂದ್ರೇಗೌಡ, ಹರಿಚಿದಂಬರ್, ಗ್ರಾಪಂ ಅಧ್ಯಕ್ಷ ರಂಗಸ್ವಾಮಿ, ವಕೀಲ ಕೆ.ಸಿ.ಹರೀಶ್, ಎಡತೊರೆ ಬಿ.ಎಡ್. ಕಾಲೇಜಿನ ವ್ಯವಸ್ಥಾಪಕ ಲೋಕೇಶ್ ಭರಣಿ, ದೇವಾಲಯ ಸಮಿತಿ ಅಧ್ಯಕ್ಷ ಕೆ.ಬಿ.ಬಲರಾಮೇಗೌಡ, ಗೌರವಾಧ್ಯಕ್ಷ ಕೆ.ಬಿ.ಪ್ರಕಾಶ್, ಉಪಾಧ್ಯಕ್ಷ ಎಚ್.ಪಿ.ನಾಗರಾಜೇಗೌಡ, ಕಾರ್ಯದರ್ಶಿ ಕೆ.ಎಸ್.ಹಿರಣ್ಣಯ್ಯ, ಮುಖಂಡರಾದ ಅನಂತ್‌ಕುಮಾರ್ ಬಾಬು, ರಾಘು, ಕಾಂತರಾಜು, ಎಚ್.ಬಿ.ಕುಮಾರ್, ಎಚ್.ಕೆ.ಮಂಜು, ಮಧು ಇತರರು ಇದ್ದರು.