ಶ್ರೀ ಪಂಚಶಕ್ತಿ ಜಲದುರ್ಗಿ ಜಾತ್ರೆ

nrp temp
ಅರಳಿಕೊಪ್ಪ ಗ್ರಾಮದ ಕುರುಕಬಳ್ಳಿ ಶ್ರೀ ಪಂಚಶಕ್ತಿ ಜಲದುರ್ಗಿ ದೇವಸ್ಥಾನ.
Published on

ಎನ್.ಆರ್.ಪುರ: ಅರಳಿಕೊಪ್ಪ ಗ್ರಾಮದ ಕುರುಕಬಳ್ಳಿ ಶ್ರೀ ಪಂಚಶಕ್ತಿ ಜಲದುರ್ಗಿ ದೇವಸ್ಥಾನ ಹಾಗೂ ಶ್ರೀರಾಮ ದೇವಸ್ಥಾನದಲ್ಲಿ ಜಾತ್ರಾ ಮಹೋತ್ಸವ ಪ್ರಾರಂಭವಾಗಿದ್ದು ಶುಕ್ರವಾರ ಹಾಗೂ ಶನಿವಾರ ಪಲ್ಲಕ್ಕಿ ಉತ್ಸವ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.

ಶುಕ್ರವಾರ 9 ಗಂಟೆಗೆ ಧ್ವಜಾರೋಹಣ, 10.30ಕ್ಕೆ ಪಲ್ಲಕ್ಕಿ ಉತ್ಸವ, ದುರ್ಗಿ ಶಾಂತಿ, ಶ್ರೀರಾಮನ ಮುಖ ತೊಳೆಸಲಾಯಿತು. ನಂತರ ಅನ್ನಸಂತರ್ಪಣೆ ನಡೆಯಿತು. ಶನಿವಾರ ಸಾಮೂಹಿಕ ಸತ್ಯನಾರಾಯಣ ಪೂಜೆ, ಪ್ರಸಾದ ವಿನಿಯೋಗ ನಡೆಯಿತು. ರಾತ್ರಿ ದೇವರ ಪಲ್ಲಕ್ಕಿ ಉತ್ಸವ ಹೊರಡುವ ಕಾರ್ಯಕ್ರಮ ನಡೆಯಿತು. ಬೆಳಗಿನ ಜಾವ ಕೆಂಡಾರ್ಚನೆ, ವಿಶೇಷ ಪೂಜೆ, ಮಹಾ ಮಂಗಳಾರತಿ ಹಾಗೂ ಶ್ರೀರಾಮ ದೇವರ ಗುಡಿ ತುಂಬಿಸುವ ಕಾರ್ಯಕ್ರಮ ನಡೆಯಿತು. ಮೇ 5ರಂದು ಬೆಳಗ್ಗೆ ಭೂತರಾಜ ದೇವರಿಗೆ ಹರಕೆ ಸೇವೆ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net