ಸೆ.16ರಂದು ನಾರಾಯಣಗುರು ಸಂಶೋಧನಾ ಪ್ರಶಸ್ತಿ ಪ್ರದಾನ

narayanaguru
Published on

ಮೂಲ್ಕಿ: ಮಂಗಳೂರು ವಿಶ್ವವಿದ್ಯಾಲಯದ ಬ್ರಹ್ಮಶ್ರೀ ನಾರಾಯಣಗುರು ಅಧ್ಯಯನ ಪೀಠದ ಸಂಯೋಜನೆಯ ನಾರಾಯಣಗುರು ಸಂಶೋಧನಾ ಪ್ರಶಸ್ತಿ ಪ್ರದಾನ ಸಮಾರಂಭ ಸೆ.16ರಂದು ಬೆಳಿಗ್ಗೆ 10.30ಕ್ಕೆ ವಿಶ್ವವಿದ್ಯಾಲಯ ಒಳಾಂಗಣ ಕ್ರೀಡಾಂಗಣದ ಸಭಾಭವನದಲ್ಲಿ ನಡೆಯಲಿದೆ.

ವಿವಿ ಕುಲಪತಿ ಪ್ರೊ.ಸುಬ್ರಹ್ಮಣ್ಯ ಯಡಪಡಿತ್ತಾಯ ಅಧ್ಯಕ್ಷತೆ ವಹಿಸಲಿದ್ದು, ವಿಶ್ರಾಂತ ಕುಲಪತಿ ಪ್ರೊ.ಬಿ.ಎ.ವಿವೇಕ ರೈ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಈ ಸಂದರ್ಭ ಪ್ರಸಾರಾಂಗ ಪ್ರಕಟಿಸಿರುವ ಪ್ರಶಸ್ತಿ ಪುರಸ್ಕೃತ ಕೃತಿ ಗುರು ತತ್ವದರ್ಶನ ಬಿಡುಗಡೆಯಾಗಲಿದೆ.

2021ರ ನಾರಾಯಣಗುರು ಸಂಶೋಧನಾ ಪ್ರಶಸ್ತಿ ಯುವ ಬರಹಗಾರ, ಸಂಶೋಧಕ ಡಾ.ಅರುಣ್ ಉಳ್ಳಾಲ್ ಅವರಿಗೆ ಲಭಿಸಿದೆ. ಪ್ರಶಸ್ತಿ 10 ಸಾವಿರ ರೂ.ನಗದನ್ನು ಒಳಗೊಂಡಿದೆ. ನಾರಾಯಣ ಗುರುಗಳ 168ನೇ ಜನ್ಮದಿನೋತ್ಸವದ ಪ್ರಯುಕ್ತ ಹಿರಿಯ ಪತ್ರಕರ್ತ ಕೆ.ಮೋಹನ್‌ಚಂದ್ರನ್ ನಂಬಿಯಾರ್ ಎಜುಕೇಶನ್ ಈಸ್ ಪವರ್ ಎಂಬ ವಿಷಯದಲ್ಲಿ ವಿಶೇಷ ಉಪನ್ಯಾಸ ನೀಡಲಿದ್ದಾರೆ.

ಅಂದು ಬೆಳಗ್ಗೆ 9.30ರಿಂದ ತೋನ್ಸೆ ಪುಷ್ಕಳ ಕುಮಾರ್ ಮತ್ತು ಡಾ.ದಿನಕರ ಪಚ್ಚನಾಡಿ ಅವರಿಂದ ಬ್ರಹ್ಮಶ್ರೀ ನಾರಾಯಣ ಗುರುತತ್ವ ವಾಚನ ಪ್ರವಚನ ನಡೆಯಲಿದೆ. ವಿವಿ ಕುಲಸಚಿವ ಡಾ.ಕಿಶೋರ್ ಕುಮಾರ್ ಸಿ.ಕೆ, ಕಾಟಿಪಳ್ಳ ನಾರಾಯಣಗುರು ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಪಿ.ದಯಾಕರ್, ಪ್ರಸಾರಾಂಗದ ನಿರ್ದೇಶಕ ಪ್ರೊ.ಸೋಮಣ್ಣ ಭಾಗವಹಿಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net