ಶ್ರೀ ನಗರೇಶ್ವರ ಜಯಂತಿ ಅದ್ದೂರಿ ಆಚರಣೆ

lng nagareshawra
ಶ್ರೀ ನಗರೇಶ್ವರ ದೇವರು.
Published on

ಲಿಂಗಸುಗೂರು: ಪಟ್ಟಣದ ಆರ್ಯವೈಶ್ಯ ಸೇವಾ ಸಂಘದಿಂದ ಶ್ರೀ ನಗರೇಶ್ವರ ದೇವರ 54ನೇ ವರ್ಷದ ಜಯಂತಿ ಸೋಮವಾರ ಆಚರಿಸಲಾಯಿತು.

ಬೆಳಗ್ಗೆ ಶ್ರೀ ನಗರೇಶ್ವರ ದೇವರಿಗೆ ರುದ್ರಾಭಿಷೇಕ, ಹೂವಿನ ವಿಶೇಷ ಅಲಂಕಾರ, ಮಹಾಮಂಗಳಾರತಿ ಜರುಗಿತು. ಬಳಿಕ ನಗರೇಶ್ವರ ದೇವಸ್ಥಾನದಿಂದ ದೊಡ್ಡ ಹನುಮಂತ ದೇವಸ್ಥಾನದವರೆಗೆ ದೇವರ ಪಲ್ಲಕ್ಕಿ ಉತ್ಸವ, ಆರ್ಯವೈಶ್ಯ ಮಹಿಳಾ ಘಟಕದಿಂದ ಶ್ರೀ ಲಲಿತಾ ಸಹಸ್ರ ನಾಮಾವಳಿ ಪಠಣ, ತೊಟ್ಟಿಲು ಸೇವೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು.

ಸಂಘದ ತಾಲೂಕು ಅಧ್ಯಕ್ಷ ಪ್ರಲ್ಹಾದಶೆಟ್ಟಿ ಕೊಂಪಲ್, ಉಪಾಧ್ಯಕ್ಷ ಈರಣ್ಣ ಶೆಟ್ಟಿ, ಪ್ರಮುಖರಾದ ಲಕ್ಷ್ಮೀಪತಿ ಬಾಗಲವಾಡ, ಅಮರಯ್ಯ ಬಾಗಲವಾಡ, ಎಚ್.ಇ.ನಾಗರಾಜ ಶೆಟ್ಟಿ, ಶ್ರೀನಿವಾಸ ಚೌಧರಿ, ಗೋಪಾಲಕೃಷ್ಣ ಕನಕಗಿರಿ, ವೆಂಕಣ್ಣ ಶೆಟ್ಟಿ ಕೊಂಪಲ್, ಲಕ್ಷ್ಮೀಕಾಂತ ಕೊಂಪಲ್, ಶ್ರೀಧರ ಕೊಂಡ, ನಾಗರಾಜ ತಾವರಗೇರಾ, ಪ್ರಮೋದಿನಿ, ರಮಾ, ರಾಜೇಶ್ವರಿ ಕೊಂಪಲ್, ಭಾರತಿ ಹೊಸೂರು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net