

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ವಿದ್ಯಾಗಿರಿಯಲ್ಲಿ ಸುಮಾರು 8ನೇ ಶತಮಾನದಲ್ಲಿ ಜಕಣಾಚಾರಿಯವರಿಂದ ನಿರ್ಮಿತ ಶ್ರೀ ಮೈಲಾರಲಿಂಗ ದೇವಾಲಯದಲ್ಲಿ ಫೆ. 23ರಂದು ಶ್ರೀ ಮೈಲಾರಲಿಂಗ ದೇವರ ಜಾತ್ರೆ ಹಾಗೂ ಕಾರ್ಣಿಕೋತ್ಸವ ಜರುಗಲಿದೆ. ಮಧ್ಯಾಹ್ನ 12 ಗಂಟೆಗೆ ಶ್ರೀ ಮೈಲಾರಲಿಂಗ ದೇವಸ್ಥಾನದ ವಂಶ ಪಾರಂಪರಿಕ ಕಾರ್ಣಿಕ ಪುರುಷ ಶ್ರೀ ಸಿರಿಮಲ್ಲ ತಿಪ್ಪಣ್ಣ ಶಿರೋಳ ಅವರ ನೇತೃತ್ವದಲ್ಲಿ 59ನೇ ಕಾರ್ಣಿಕೋತ್ಸವ ಜರುಗಲಿದೆ. ನಂತರ ಅನ್ನ ಸಂತರ್ಪಣೆ, ಸಂಜೆ 4.30ಕ್ಕೆ ಮಹಾಮಂಗಳಾರತಿ, ಪಲ್ಲಕ್ಕಿ ಉತ್ಸವ, ಕಾರ್ಣಿಕ ಸೇವೆ, ಸರಪಳಿ ಸೇವೆ ಜರಗಲಿವೆ ಎಂದು ಪ್ರಕಟಣೆ ತಿಳಿಸಿದೆ.