ವಿದ್ಯಾರ್ಥಿ ಜೀವನ ಭವಿಷ್ಯ ರೂಪಿಸಿಕೊಳ್ಳುವ ಸಮಯ

5 Dwd 6
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಶಿಕ್ಷಣ ಮನುಷ್ಯನನ್ನು ಎತ್ತರಕ್ಕೆ ಒಯ್ಯುತ್ತದೆ. ವಿದ್ಯಾರ್ಥಿ ಜೀವನವು ಭವಿಷ್ಯ ರೂಪಿಸಿಕೊಳ್ಳುವ ಸಮಯವಾಗಿದೆ ಎಂದು ಕರ್ನಾಟಕ ನಗರ ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮದ ಕಾರ್ಯನಿರ್ವಾಹಕ ನಿರ್ದೇಶಕ, ಮೇಜರ್ ಸಿದ್ದಲಿಂಗಯ್ಯ ಹಿರೇಮಠ ಹೇಳಿದರು.
ನಗರದ ಕೆಎಲ್‌ಇ ಸಂಸ್ಥೆಯ ಶ್ರೀ ಮೃತ್ಯುಂಜಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಕ್ರೀಡಾ ಹಾಗೂ ಸಾಂಸ್ಕೃತಿಕ ಸಂಘಗಳ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಓದಿನಲ್ಲಿ ಆಸಕ್ತಿ ಹೆಚ್ಚಿಸಿಕೊಳ್ಳಬೇಕು. ಯಶಸ್ಸು ಒಂದು ದಿನದಲ್ಲಿ ಸಾಽಸುವಂಥದ್ದಲ್ಲ. ಜ್ಞಾನ, ವಿವಿಧ ಭಾಷೆಗಳ ಕಲಿಕೆ, ಕೌಶಲ್ಯಗಳ ಅಭಿವೃದ್ಧಿ ಯಶಸ್ಸಿಗೆ ಹಾದಿ ಎಂದರು.
ಕೆಎಲ್‌ಇ ಸಂಸ್ಥೆಯ ಸ್ಥಾನಿಕ ಆಡಳಿತ ಮಂಡಳಿ ಸದಸ್ಯ ವೈ.ಬಿ. ಮದ್ನೂರ ಮಾತನಾಡಿ, ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು. ವಿವಿಧ ಭಾಷೆಗಳ ಪ್ರಾವಿಣ್ಯತೆಯನ್ನು ಹೊಂದಬೇಕು. ಓದು, ಮಾತು ಮತ್ತು ಬರವಣಿಗೆ ಕಲೆ ಮೈಗೂಡಿಸಿಕೊಳ್ಳಬೇಕು ಎಂದರು.
ಪ್ರಾಚಾರ್ಯೆ ಡಾ. ನೀಲಕ್ಕ ಸಿ. ಪಾಟೀಲ ಸ್ವಾಗತಿಸಿದರು. ಪ್ರೊ. ಎಸ್.ಎಸ್. ಸಂಗೊಳ್ಳಿ ಪರಿಚಯಿಸಿದರು. ಪ್ರೊ. ನಾಗರಾಜ ಕೋಟಗಾರ ಮತ್ತು ಸಂದೀಪ ಪಾಟೀಲ ವಾರ್ಷಿಕ ವರದಿ ಮಂಡಿಸಿದರು.
ಎಸ್.ಎಸ್. ಶಿವಳ್ಳಿ, ಅಶೋಕ ಚಿಕ್ಕೋಡಿ, ಸಿ.ಎಸ್. ಪಾಟೀಲ, ಇತರರಿದ್ದರು. ಪ್ರೊ. ಉಮೇಶ ನೀಲಪ್ಪನವರ ನಿರೂಪಿಸಿದರು. ಆಲಿಯಾ ನಾಝ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net