

ಜಮಖಂಡಿ: ನಗರದ ಜಂಬುಕೇಶ್ವರ ದೇವಸ್ಥಾನದ ಹತ್ತಿರ ಮಾ.9ರಿಂದ 10ರ ವರೆಗೆ ಶೃಂಗೇರಿ ಶಾರದಾ ಪೀಠದ ಜಗದ್ಗುರು ಶಂಕರಾಚಾರ್ಯ ಮಹಾಸಂಸ್ಥಾನದ ಶಾಖಾಮಠದ ಶೃಂಗೇರಿ ಶಂಕರಮಠ ಉದ್ಘಾಟನೆ ಹಾಗೂ ಕುಂಭಾಭಿಷೇಕ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.
ಶಕ್ತಿಗಣಪತಿ, ಶಾರದಾಂಬ, ಚಂದ್ರಮೌಳೀಶ್ವರ, ಶಂಕರಾಚಾರ್ಯರ ಮೂರ್ತಿ ಪ್ರತಿಷ್ಠಾಪನೆ ಜರಗುವುದು.
ಮಾ.9ರಂದು ಸಾಯಂಕಾಲ 5 ಗಂಟೆಗೆ ಜಗದ್ಗುರು ವಿಧುಶೇಖರಭಾರತೀ ಶ್ರೀಗಳ ಪುರಪ್ರವೇಶ ಆರಂಭವಾಗಿ ಬನಶಂಕರಿ ಶಾಲೆಯಿಂದ, ಗವಳಿ ಗಲ್ಲಿ, ದೇಸಾಯಿ ಗಲ್ಲಿ, ಮಲ್ಲಿಕಾರ್ಜುನ ಗಲ್ಲಿ, ಮುಧೋಳ ರಸ್ತೆ, ಗಣಪತಿ ಗಲ್ಲಿ, ಸಾಬಡೆ ಗಲ್ಲಿ ಮಾರ್ಗವಾಗಿ ಹೊಕ್ಕಳಬಾವಿ ವರೆಗೆ ಮೆರವಣಿಗೆ ಸಾಗಲಿದೆ. ತದನಂತರ ಶ್ರೀಗಳು ಶ್ರೀಮಠವನ್ನು ಉದ್ಘಾಟಿಸಿ ಆಶೀರ್ವಚನ ನೀಡುವರು. ರಾತ್ರಿ 8.30ಕ್ಕೆ ಶ್ರೀಗಳಿಂದ ಚಂದ್ರಮೌಳೀಶ್ವರ ಪೂಜೆ ನೆರವೇರಿಸಲಾಗುವುದು.
ಮಾ.10ರಂದು ಬೆಳಗ್ಗೆ 8ಗಂಟೆಗೆ ಶ್ರೀಮಠದ ಅರ್ಚಕರಿಂದ ಚಂದ್ರಮೌಳೀಶ್ವರ ಪೂಜೆ, 10 ಗಂಟೆಗೆ ಶ್ರೀಗಳಿಂದ ಕುಂಭಾಭಿಷೇಕ, ಶ್ರೀಗಳ ದರ್ಶನ, ಭಕ್ತರಿಂದ ಪಾದಪೂಜೆ, ಭಿಕ್ಷಾ ವಂದನೆ ಸೇವೆ ಜರಗಲಿದೆ.
ನಂತರ ಶ್ರೀಗಳಿಂದ ತೀರ್ಥ ಪ್ರಸಾದ ವಿತರಣೆ, ಲ ಮಂತ್ರಾಕ್ಷತೆ ಜರುಗುವುದು ಎಂದು ಶಾಖಾ ಮಠದ ವ್ಯವಸ್ಥಾಪಕ ಸಂತೋಷ ಹಲ್ಯಾಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.