

ಸಿದ್ದಾಪುರ: ಸುಷಿರ ಸಂಗೀತ ಪರಿವಾರ ಭುವನಗಿರಿ-ಕಲ್ಲಾರೆಮನೆ ಹಾಗೂ ಭುವನಗಿರಿ ದೇವಾಲಯದ ಸಂಯೋಜನೆಯಲ್ಲಿ ನಾಡಿನ ಶ್ರೇಷ್ಠ ವಿದ್ವಾಂಸರಿಂದ ಶ್ರೀ ಮಾತಾ ವೈಭವಂ ಉಪನ್ಯಾಸ ಮಾಲಿಕೆ ಜು. 25ರಿಂದ 31ರವರೆಗೆ ನಿತ್ಯ ಸಂಜೆ 4.30ರಿಂದ 6ರವರೆಗೆ ತಾಲೂಕಿನ ಭುವನಗಿರಿ ದೇವಾಲಯದಲ್ಲಿ ಏರ್ಪಾಟಾಗಿದೆ.
ಜು. 25ರಂದು ವಿ. ಚಂದ್ರಶೇಖರ ಭಟ್ಟ ಗಾಳಿಮನೆ ಅವರಿಂದ ವೇದ ಸಾಹಿತ್ಯಗಳಲ್ಲಿ ಶ್ರೀ ಮಾತೆ, ಜು. 26ರಂದು ವಿ. ಸುದರ್ಶನ ಭಟ್ಟ ಘಟ್ಟಿಕೈ ಇವರಿಂದ ಪುರಾಣ ಸಾಹಿತ್ಯಗಳಲ್ಲಿ ಶ್ರೀ ಮಾತೆ, ಜು. 27ರಂದು ವಿ.ಅನಂತಮೂರ್ತಿ ಭಟ್ಟ ಯಲೂಗಾರ ಅವರಿಂದ ಶಂಕರರ ಸ್ತೋತ್ರಗಳಲ್ಲಿ ಶ್ರೀ ಮಾತೆ, 28ರಂದು ವಿ. ಪ್ರದೀಪ ಜೋಷಿ ಶಿವಳಮನೆ ಅವರಿಂದ ದೇವಿ ಭಾಗವತದಲ್ಲಿ ಶ್ರೀ ಮಾತೆ, 29ರಂದು ವಿ. ವಿಶ್ವನಾಥ ಭಟ್ಟ ನೀರಗಾನ ಅವರಿಂದ ಮಾರ್ಕಂಡೇಯ ಪುರಾಣ(ಚಂಡೀ ಪಾಠ)ದಲ್ಲಿ ಶ್ರೀ ಮಾತೆ, 30ರಂದು ವಿ. ಶಿವರಾಮ ಭಾಗವತ ಯಲ್ಲಾಪುರ ಅವರಿಂದ ಲಲಿತಾ ಸಹಸ್ರನಾಮದಲ್ಲಿ ಶ್ರೀ ಮಾತೆ ಹಾಗೂ ಜು. 31ರಂದು ವಿ. ಮಹೇಶ ಭಟ್ಟ ಇಡಗುಂದಿ ಇವರಿಂದ ಉಪನಿಷತ್ ಗಳಲ್ಲಿ ಶ್ರೀ ಮಾತೆ ಕುರಿತು ಉಪನ್ಯಾಸ ನಡೆಯಲಿದೆ ಎಂದು ಸಂಘಟರು ತಿಳಿಸಿದ್ದಾರೆ.