ಶ್ರೀ ಮಾರುತಿ ಹಾಲುಗಂಬ ಉತ್ಸವ ಅದ್ದೂರಿ

26 DVD 01
ದೇವದುರ್ಗ ತಾಲೂಕು ಕಕ್ಕಲದೊಡ್ಡಿ ಗ್ರಾಮದಲ್ಲಿ ಶ್ರೀ ಮಾರುತಿ ದೇವರ ಹಾಲುಗಂಬ ಉತ್ಸವ ನಿಮಿತ್ತ ಶ್ರೀ ಮಾರುತಿ ಮೂರ್ತಿ ಹಾಗೂ ಹಾಲುಗಂಬ ಮೆರವಣಿಗೆ ಮಾಡಲಾಯಿತು.
Published on

ದೇವದುರ್ಗ: ತಾಲೂಕಿನ ಕಕ್ಕಲದೊಡ್ಡಿ ಗ್ರಾಮದ ಆರಾಧ್ಯದೈವ ಶ್ರೀ ಮಾರುತಿ ದೇವರ ಹಾಲುಗಂಬ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಶನಿವಾರ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಶ್ರದ್ಧಾಭಕ್ತಿಯಿಂದ ಜರುಗಿದವು.

ಬೆಳಗ್ಗೆ ಶ್ರೀ ಅಮರಯ್ಯ ಸ್ವಾಮಿ ಹಿರೇಮಠ ಹಾಗೂ ಮಲಕಣ್ಣ ಪೂಜಾರಿ ನೇತೃತ್ವದಲ್ಲಿ ಶ್ರೀ ಮಾರುತಿ ಮೂರ್ತಿಗೆ ವಿಶೇಷ ಪೂಜೆ, ಎಲೆಪೂಜೆ ಹಾಗೂ ಮಂಗಳಾರತಿ ಜರುಗಿದವು. ನಂತರ ಹಾಲುಗಂಬ ಹಾಗೂ ಶ್ರೀ ಆಂಜನೇಯ ದೇವರಮೂರ್ತಿ ಗ್ರಾಮದಲ್ಲಿ ಮೆರವಣಿಗೆ ಮಾಡಲಾಯಿತು. ಮೆರವಣಿಗೆಯಲ್ಲಿ ಕುಂಭ ಕಳಸ, ಭಾಜ ಭಜಂತ್ರಿ, ಡೊಳ್ಳಿನ ತಂಡಗಳು ಭಾಗವಹಿಸಿ ಗಮನ ಸೆಳೆದವು. ಬಳಿಕ ದೇವಸ್ಥಾನ ಮುಂಭಾಗ ಹಾಲುಗಂಬ ಪ್ರತಿಷ್ಠಾಪನೆ ಮಾಡಿ ವಿಶೇಷ ಪೂಜೆ ಸಲ್ಲಿಸಲಾಯಿತು.

ಗ್ರಾಮಸ್ಥರಾದ ವೆಂಕಟರಾಯಗೌಡ ಬೆನಕನ್, ಹನುಮರೆಡ್ಡಿ ವಜ್ಜಲ್, ಭೀಮನಗೌಡ ಮಾಪಾ, ಶಿವನಗೌಡ ಪೊಪಾ, ಸುಭಾಷ್‌ಚಂದ್ರ ಬೇವಿನಗಿಡ, ಮಂಜುನಾಥ ಮಲ್ಲಾಪುರ, ಕೊಳ್ಳಪ್ಪ ದೇಸಾಯಿ, ಶಿವನಗೌಡ ದೇಸಾಯಿ, ಯಂಕಣ್ಣ ಸಾಹುಕಾರ, ಶರಣಗೌಡ ಬೆನಕನ್, ಮಲ್ಲಿಕಾರ್ಜುನ ಮಲ್ಕಾಪುರ, ಮಲ್ಲರೆಡ್ಡಿ ಮಾಡಬಾಳ, ಶಿವಕುಮಾರ ಪಾಟೀಲ್, ಬಾಪುಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net