

ಹೆಬ್ರಿ: ಇಲ್ಲಿನ ಶ್ರೀ ಅನಂತಪದ್ಮನಾಭ ದೇವಸ್ಥಾನದಲ್ಲಿ ಶ್ರೀ ಮನ್ಮಹಾರಥೋತ್ಸವದ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮ ಶುಕ್ರವಾರ ನಡೆಯಿತು. ಶ್ರೀ ಮನ್ಮಹಾರಥೋತ್ಸವ, ಸಾರ್ವಜನಿಕ ಮಹಾ ಅನ್ನಸಂತರ್ಪಣೆ, ಶ್ರೀ ಭೂತ ಬಲಿ, ಶಯನೋಲಗ ತಂತ್ರಿಗಳಾದ ಪ್ರೇಮಚಂದ್ರ ಐತಾಳ್ ಮಾರ್ಗದರ್ಶನದಲ್ಲಿ ನೆರವೇರಿತು. ಶನಿವಾರ ಕವಾಟೋದ್ಘಾಟನಾ, ಭಕ್ತರ ತುಲಾಭಾರ ಸೇವೆ, ಭಜನೆ, ಬೀದಿ ರಥೋತ್ಸವ, ವಸಂತೋತ್ಸವ, ಅವಭೃತ ಪೂರ್ಣಹುತಿ, ಧ್ವಜಾರೋಹಣ, ಮಹಾ ಅನ್ನಸಂತರ್ಪಣೆ ಜರುಗಿತು.
ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎಚ್.ತಾರಾನಾಥ್ ಬಲ್ಲಾಳ್, ಸದಸ್ಯರಾದ ಎಚ್.ಬಾಲಕೃಷ್ಣ ನಾಯಕ್, ಭಾನು ಪಿ.ಬಲ್ಲಾಳ್, ಎಚ್.ರಾಮಕೃಷ್ಣ ಆಚಾರ್ಯ, ಐತು ಕುಲಾಲ್, ಜಯಕರ ಪೂಜಾರಿ, ಪದ್ಮ ಪಿ.ನಾಯಕ್, ಕೇಶವ ನಾಯ್ಕ, ತಂತ್ರಿ ಪ್ರೇಮ ಚಂದ್ರ ಐತಾಳ್, ವಾದಿರಾಜ ಓಕುಡ, ಗುರುಮೂರ್ತಿ ಜೋಯಿಸ್ ಉಪಸ್ಥಿತರಿದ್ದರು.