ಮುಂಡರಗಿ: ಪಟ್ಟಣದ ಶ್ರೀ ಮಂಜುನಾಥ ದೇವಸ್ಥಾನದ 9ನೇ ವಾರ್ಷಿಕೋತ್ಸವ ಹಾಗೂ ಮಹಾಶಿವರಾತ್ರಿ ಪ್ರಯುಕ್ತ ಫೆ. 26ರಂದು ಶ್ರೀ ಮಂಜುನಾಥ ಪಲ್ಲಕ್ಕಿ ಉತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ದೇವಸ್ಥಾನ ಟ್ರಸ್ಟ್ ಕಮಿಟಿ ಅಧ್ಯಕ್ಷ ಈಶ್ವರಪ್ಪ ಕವಲೂರ ಹೇಳಿದರು.
ಪಟ್ಟಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಫೆ. 26ರಂದು ಬೆಳಗ್ಗೆ 8.30ಕ್ಕೆ ಕುಂಭಮೇಳ, ಕಳಶ, ಸಕಲ ವಾದ್ಯ ಮೇಳದೊಂದಿಗೆ ಪಲ್ಲಕ್ಕಿ ಉತ್ಸವ ಜರುಗಲಿದೆ. ನಾಡೋಜ ಡಾ. ಅನ್ನದಾನೀಶ್ವರ ಶಿವಯೋಗಿಗಳ ಸಾನ್ನಿಧ್ಯದಲ್ಲಿ ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಚಾಲನೆ ನೀಡಲಿದ್ದಾರೆ. ಬಸವಂತಪ್ಪ ಹೊಸಮನಿ, ಪರುಶುರಾಮ ರಾಮೇನಹಳ್ಳಿ, ಡಿ.ಜಿ. ಹಿರೇಮಠ, ರಮೇಶಪ್ಪ ಭೂಮರಡ್ಡಿ, ಈಶ್ವರಪ್ಪ ಹಂಚಿನಾಳ, ನಾರಾಯಣಪ್ಪ ಇಲ್ಲೂರ, ರವೀಂದ್ರ ಉಪ್ಪಿನಬೆಟಗೇರಿ ಭಾಗವಹಿಸಲಿದ್ದಾರೆ ಎಂದರು.
ಕಮಿಟಿ ಮಾಜಿ ಅಧ್ಯಕ್ಷ ಬಸವಂತಪ್ಪ ಹೊಸಮನಿ ಮಾತನಾಡಿ, 26ರಂದು ಸಂಜೆ 7.30ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಅಧ್ಯಕ್ಷ ಈಶ್ವರಪ್ಪ ಕವಲೂರ ಅಧ್ಯಕ್ಷತೆ ವಹಿಸುವರು. ಶಾಸಕ ಡಾ. ಚಂದ್ರು ಲಮಾಣಿ, ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ, ಅಖಿಲ ಕರ್ನಾಟಕ ಮೋಚಿಗಾರ ಸಮಾಜದ ರಾಜ್ಯಾಧ್ಯಕ್ಷ ಶಿವಣ್ಣ ಮುಳಗುಂದ, ಚಂದ್ರಕಾಂತ ಯಾವಗಲ್ ಉದ್ಘಾಟಿಸುವರು. ಅರುಣಾ ಹಂದ್ರಾಳ, ರಾಜೇಶ್ವರಿ ಇನಾಮ್ದಾರ್ ಉಪನ್ಯಾಸ ನೀಡುವರು. ಪುರಸಭೆ ಅಧ್ಯಕ್ಷೆ ನಿರ್ಮಲಾ ಕೊರ್ಲಹಳ್ಳಿ, ಉಪಾಧ್ಯಕ್ಷ ನಾಗೇಶ ಹುಬ್ಬಳ್ಳಿ, ಮತ್ತಿತರರು ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು. ಅಶೋಕ ಸವಣೂರ, ಸುರೇಶ ಗುಡಿ, ಗಂಗಾಧರ ದೊಡ್ಡಮನಿ, ಪ್ರಭು ಗುಗ್ಗರಿ, ಪರಶುರಾಮ ಗುಗ್ಗರಿ, ಬಸವರಾಜ ರಾಮೇನಹಳ್ಳಿ, ಮಹಾದೇವಪ್ಪ ಹೊಸಮನಿ, ಉಮೇಶ ಬನ್ನಿಕೊಪ್ಪ, ಹನುಮಂತಪ್ಪ ದೊಡ್ಡಮನಿ ಇತರರಿದ್ದರು.