ಶ್ರೀ ಮಲ್ಲಿಕಾರ್ಜುನ ಜಾತ್ರಾ ಮಹೋತ್ಸವ

KALAGATAGI
Published on

ಕಲಘಟಗಿ: ಪಟ್ಟಣದ ಬೆಂಡಿಗೇರಿ ಓಣಿಯಲ್ಲಿರುವ ಶ್ರೀ ಮಲ್ಲಿಕಾರ್ಜುನ ದೇವರ ಜಾತ್ರಾ ಮಹೋತ್ಸವ ಶನಿವಾರ ವಿಜೃಂಭಣೆಯಿಂದ ಜರುಗಿತು. ಶುಕ್ರವಾರ ರಾತ್ರಿ ಶಿವನಾಮ ಸ್ಮರಣೆ ಹಾಗೂ ಭಜನೆ ಕಾರ್ಯಕ್ರಮಗಳು ಜರುಗಿದವು.

ಶನಿವಾರ ಬೆಳಗ್ಗೆ ಹನ್ನೆರಡುಮಠದ ಶ್ರೀ ರೇವಣಸಿದ್ಧ ಶಿವಾಚಾರ್ಯರ ದಿವ್ಯ ಸಾನ್ನಿಧ್ಯದಲ್ಲಿ ದೇವಸ್ಥಾನದ ಅರ್ಚಕ ಮತ್ತು ಪುರೋಹಿತರಾದ ಶ್ರೀ ವೀರೇಶ ಶಾಸ್ತ್ರಿಗಳ ನೇತೃತ್ವದಲ್ಲಿ ಶ್ರೀ ಮಲ್ಲಿಕಾರ್ಜುನ ದೇವರಿಗೆ ಮಹಾರುದ್ರಾಭಿಷೆೇಕ, ನವಗ್ರಹ ಶಾಂತಿ, ಹೋಮ-ಹವನ ಸಹಸ್ರ ಬಿಲ್ವಾರ್ಚನೆ, ಪುಷ್ಪಾಲಂಕಾರ ಹಾಗೂ ಮಹಾ ಮಂಗಳಾರತಿ ಕಾರ್ಯಕ್ರಮಗಳು ಜರುಗಿದವು.

ಮಧ್ಯಾಹ್ನ 1 ಗಂಟೆಗೆ ಅನ್ನ ಸಂತರ್ಪಣೆ ಕಾರ್ಯಕ್ರಮ ನೆರವೇರಿತು. ದೇವಸ್ಥಾನದ ಟ್ರಸ್ಟ್ ಕಮಿಟಿಯ ಗಂಗಯ್ಯ ತೆಗೂರಮಠ, ಶಂಕರ ಬಡಿಗೇರ, ಶಿವಾಜಿ ತಹಸೀಲ್ದಾರ್, ಅಣ್ಣಪ್ಪ ತಹಸೀಲ್ದಾರ್, ಮಾಂತೇಶ ವಿರಕ್ತಿಮಠ, ಈರಣ್ಣ ಮುಳ್ಳೂರ, ಈರಣ್ಣ ವಿರಕ್ತಿಮಠ, ಚನ್ನಬಸಯ್ಯ ಚಿಕ್ಕಮಠ, ವಿಶ್ವೇಶ್ವರಯ್ಯ ಹಿರೇಮಠ, ಸಿದ್ದಯ್ಯ ಹಿರೇಮಠ, ಚಂದ್ರಶೇಖರಯ್ಯ ಹಿರೇಮಠ, ಚನ್ನಯ್ಯ ಹಿರೇಮಠ, ಬಸಯ್ಯ ತೆಗೂರಮಠ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net