ಪರಮಾತ್ಮನ ನಾಮಸ್ಮರಣೆ ಅವಶ್ಯ

7ARATAL1
Published on

ಅರಟಾಳ:ಮನುಷ್ಯ ಜನ್ಮ ಪಾವನವಾಗಬೇಕಾದರೆ ಪರಮಾತ್ಮನ ಸ್ಮರಣೆ ಮುಖ್ಯ ಎಂದು ಕಾಂತಯ್ಯ ಸ್ವಾಮೀಜಿ ಹೇಳಿದರು.

ಗ್ರಾಮದ ಶ್ರೀಕಲ್ಮೇಶ್ವರ ದೇವಸ್ಥಾನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಶ್ರೀಮಲ್ಲಿಕಾರ್ಜುನ ಐದೇಶ ಅಂಗವಾಗಿ ಶಿವಲಿಂಗಕ್ಕೆ ಅಭಿಷೇಕ ಸಲ್ಲಿಸಿ ಮಾತನಾಡಿ, ಜೀವನದಲ್ಲಿ ನಾವು ನಡೆಯುವ ದಾರಿ ಶುದ್ಧವಾಗಿರಬೇಕು. ಭಕ್ತಿಯಿಂದ ಬದುಕಿನಲ್ಲಿ ದಾನ, ಧರ್ಮ ಮಾಡುವುದರಿಂದ ಸುಖ ಜೀವನ ಸಾಧ್ಯ ಎಂದರು. ಅಭಿಷೇಕ, ಮಹಾಪೂಜೆ, ಬೆಲ್ಲದ ನೈವೆದ್ಯ ಅರ್ಪಿಸಿ, ನಂತರ ಗ್ರಾಮದ ಮುತೈದೆಯರಿಂದ ಮಂಗಳಾರತಿ ಜರುಗಿತು. ಭಕ್ತರು ದೇವರ ಆಶೀರ್ವಾದ ಪಡೆದರು.

ಶ್ರೀಶೈಲ ಪೂಜಾರಿ, ಅಪ್ಪು ಪಾಟೀಲ, ಮಲ್ಲು ಜಂಬಗಿ, ಚನ್ನಬಸು ಬಿರಾದಾರ, ಅರ್ಜುನ ಗೊರವ, ಕಲ್ಲಪ್ಪ ಪಾಟೀಲ, ಮಲ್ಲಿಕಾರ್ಜುನ ಆನಗೊಂಡಿ, ಬಸಪ್ಪ ತೆಲಸಂಗ, ದುಂಡಪ್ಪ ಶಿರಹಟ್ಟಿ, ಗಿರಮಲ್ಲ ಮಾಳಿ, ಸಿದ್ರಾಮ ಪೂಜಾರಿ, ಸದಾಶಿವ ನಾಯಿಕ, ಸುಶೀಲಾ ಜಂಬಗಿ, ಜಯಶ್ರೀ ಪಾಟೀಲ, ಲಕ್ಷ್ಮೀ ಮಾಳಿ, ಅನ್ನಪೂರ್ಣಾ ಬಿರಾದಾರ, ಕೌಶಲ್ಯ ಜಂಬಗಿ, ಸಂಗೀತಾ ಗೊರವ, ಅನುಪ್ರೀಯಾ ಪಾಟೀಲ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net