

ಚಿಕ್ಕಮಗಳೂರು: ತರೀಕೆರೆ ತಾಲೂಕಿನ ಕೆರೆಹೊಸಳ್ಳಿ ಗ್ರಾಮದ ಶ್ರೀ ಬಸವೇಶ್ವರ ಸ್ವಾಮಿ ಉತ್ಸವ ಹಾಗೂ ಶ್ರೀ ಮಲ್ಲಿಗೆಮ್ಮನವರ ಜಾತ್ರಾ ಮಹೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಏ.16 ರಂದು ಬೆಳಗ್ಗೆ 5 ಗಂಟೆಗೆ ಉತ್ಸವಕ್ಕೆ ಕಳಸ ಏರಿಸುವುದು, 7 ಗಂಟೆಗೆ ಗ್ರಾಮದ ರಾಜಬೀದಿಗಳಲ್ಲಿ ಮಂಗಳವಾದ್ಯ, ವೀರಗಾಸೆ ಕಲಾ ತಂಡಗಳೊಂದಿಗೆ ಶ್ರೀ ಬಸವೇಶ್ವರ ಸ್ವಾಮಿಯ ಉತ್ಸವದೊಂದಿಗೆ ಶ್ರೀ ಮಲ್ಲಿಗೆಮ್ಮನವರ ದೇವಸ್ಥಾನಕ್ಕೆ ಹೋಗುವುದು. ಸಂಜೆ 4ರಿಂದ 7 ಗಂಟೆಯರವರೆಗೆ ಶ್ರೀಮಲ್ಲಿಗೆಮ್ಮನವರ ದೇವಸ್ಥಾನದಲ್ಲಿ ಭಕ್ತಾದಿಗಳಿಂದ ದುಗ್ಗಲ ಸೇವೆ ನಡೆಯಲಿದೆ. ರಾತ್ರಿ 8 ರಿಂದ ಶ್ರೀಅಮ್ಮನವರ ದೇವಸ್ಥಾನದಲ್ಲಿ ಪ್ರಸಾದ ವಿನಿಯೋಗ ಇರುತ್ತದೆ.
17 ರಂದು ಬೆಳಗ್ಗೆ 9 ಗಂಟೆಗೆ ಗ್ರಾಮಸ್ಥರಿಂದ ಶ್ರೀ ಮಲ್ಲಿಗೆಮ್ಮನವರ ದೇವಸ್ಥಾನದಲ್ಲಿ ಮಹಾಮಂಗಳಾರತಿ ಮತ್ತು ಮಧ್ಯಾಹ್ನ 12.30ಕ್ಕೆ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ. ಮತ್ತು ಅದೇ ದಿನ ಸಂಜೆ 6 ಗಂಟೆಗೆ ದೀಪಾಲಂಕಾರ, ಹೂವಿನಲಂಕಾರ ಮತ್ತು ಪಲ್ಲಕ್ಕಿ ಉತ್ಸವದೊಂದಿಗೆ ಶ್ರೀ ಬಸವೇಶ್ವರ ಸ್ವಾಮಿಯನ್ನು ಸನ್ನಿಧಿಗೆ ಕರೆ ತರಲಾಗುವುದು ಎಂದು ಶ್ರೀ ಬಸವೇಶ್ವರ ಸ್ವಾಮಿ ಹಾಗೂ ಮಲ್ಲಿಗೆಮ್ಮ ದೇವಾಲಯ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.