

ಅರಟಾಳ: ಗ್ರಾಮದಲ್ಲಿ ನಾಲ್ಕು ದಿನಗಳ ಕಾಲ ನಡೆದ ಶ್ರೀ ಮಾಳಿಂಗೇಶ್ವರ ಜಾತ್ರಾ ಮಹೋತ್ಸವ ಕರಿ ಹರಿಯುವ ಮೂಲಕ ಭಾನುವಾರ ಸಮಾಪ್ತಿಗೊಂಡಿತು.
ಜಾತ್ರೆಯಲ್ಲಿ ನಾಲ್ಕು ದಿನಗಳ ಕಾಲ ಸೇವೆ ಸಲ್ಲಿಸಿದವರನ್ನು ಕಮಿಟಿ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.
ಶ್ರೀ ಮಾಳಿಂಗೇಶ್ವರ ದೇವಸ್ಥಾನ ಕಮಿಟಿ ಅಧ್ಯಕ್ಷ ಶಿವಪ್ಪ ಹಟ್ಟಿ ಮಾತನಾಡಿ, ನಾಲ್ಕು ದಿನಗಳ ಕಾಲ ಶ್ರೀ ಮಾಳಿಂಗೇಶ್ವರ ಜಾತ್ರೆಯಲ್ಲಿ ಸೇವೆ ಸಲ್ಲಿಸಿರುವ ಎಲ್ಲರಿಗೂ ಕಮಿಟಿ ಕಡೆಯಿಂದ ಧನ್ಯವಾದ. ಜಾತ್ರಾ ಮಹೋತ್ಸವವು ಯಶಸ್ವಿಗೊಳ್ಳಲು ಹಗಲು, ರಾತ್ರಿ ಎನ್ನದೆ ದೇವರ ಸೇವೆ ಮಾಡಿದ್ದರಿಂದ ಜಾತ್ರಾ ಮಹೋತ್ಸವವು ಯಶಸ್ವಿಯಾಯಿತು.
ಗ್ರಾಪಂ, ಸಹಕಾರ ಸಂಘ, ವಿವಿಧ ಸಂಘಟನೆಗಳು, ಸರ್ಕಾರಿ ವಿವಿಧ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ನಮ್ಮೂರಿನ ಯುವಕರು, ಪೊಲೀಸ್ ಇಲಾಖೆ ಹಾಗೂ ಸಮಸ್ತ ಗ್ರಾಮಸ್ಥರ ಸಹಕಾರದಿಂದ ಜಾತ್ರಾ ಮಹೋತ್ಸವ ಯಶಸ್ವಿಯಾಗಲು ಸಾಧ್ಯವಾಯಿತು ಎಂದರು.
ಪಿಕೆಪಿಎಸ್ ಅಧ್ಯಕ್ಷ ಮಲ್ಲಪ್ಪ ಪೂಜಾರಿ, ಗ್ರಾಪಂ ಸದಸ್ಯ ರಾಮಪ್ಪ ಪೂಜಾರಿ, ಶಿವಲಿಂಗ ಪೂಜಾರಿ, ಸತ್ಯಪ್ಪ ಪೂಜಾರಿ, ಹನುಮಂತ ಬಾನುಶೆ, ದುಂಡಪ್ಪ ಪಾಟೀಲ, ಗಿರಮಲ್ಲ ಹಟ್ಟಿ, ಮಲ್ಲಪ್ಪ ಪೂಜಾರಿ, ತಮ್ಮಣ್ಣ ಪೂಜಾರಿ, ಮಲ್ಲಿಕಾರ್ಜುನ ತೆಲಸಂಗ, ಕಲ್ಮೇಶ ಪೂಜಾರಿ, ವಿಠ್ಠಲ ಹಟ್ಟಿ, ಶಂಕರ ಹಟ್ಟಿ, ಸಿದ್ದಪ್ಪ ಪೂಜಾರಿ ಇತರರು ಇದ್ದರು.